ಸುದ್ದಿ9ಮಾಣಿ ಪೆರಾಜೆ:ಧರ್ಮದ ಅಸ್ತಿತ್ವದೊಂದಿಗೆ ನಮ್ಮತನದ ಉಳಿವಿಗಾಗಿ ನಾವು ಸಂಘಟಿತರಾಗಬೇಕಾದ ಅವಶ್ಯಕತೆಯಿದೆ. ನಾವೆಲ್ಲಾ ಒಂದೇ ಕುಟುಂಬದವರಂತೆ ಬಾಳಬೇಕಾದಲ್ಲಿ ಧಾಮರ್ಿಕ ಆಚರಣೆಗಳು ಮಹತ್ವದ್ದೆನಿಸಿದೆ ಎಂದು ಮಾಜಿ ಸಂಸದೆ ಡಾ| ತೇಜಸ್ವಿನಿ ಗೌಡ ತಿಳಿಸಿದರು.
ಅವರು ಮಾಣಿ ಪೆರಾಜೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮತ್ತು ಪೆರಾಜೆ ಶ್ರೀಗುಡ್ಡ ಚಾಮೆಂಡೇಶ್ವರಿ ಸೇವಾ ಟ್ರಸ್ಟ್(ರಿ) ಆಶ್ರಯದಲ್ಲಿ ನಡೆದ 5ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇವರ ಪುರಾಣಗಳು ನಮ್ಮ ಪರಿವರ್ತನೆಗೆ ಕಾರಣವಾಗುತ್ತವೆ. ಪ್ರತಿಯೊಂದು ಹಿಂದೂ ದೇವರುಗಳಲ್ಲಿ ಒಂದೊಂದು ತತ್ವವಿದೆ, ಸತ್ವವಿದೆ, ಸುಂದರ ಪ್ರಕೃತಿ ಸೌಂದರ್ಯ, ಪವಿತ್ರ ತಾಣಗಳ ಭಾರತವನ್ನು ದರ್ಶನ ಮಾಡಿದಾಗ ದೇಶದ ಶ್ರೇಷ್ಠತೆಯನ್ನು ತಿಳಿಯ ಬಹುದು. ಹಿಂದೂ ಧರ್ಮಕ್ಕೆ ಹಿಂದೂಗಳಿಂದಲೇ ಧಕ್ಕೆಯಾಗುತ್ತಿರುವುದು ವಿಷಾದನೀಯ, ಕೇಸರಿ ಧರಿಸುವುದರಲ್ಲಿ ಸಾತ್ವಿಕತೆ, ತ್ಯಾಗ, ದೃಢತೆ, ರಾಷ್ಟ್ರಪ್ರೇಮದ ಅಂಶವಿದೆ, ಧಾಮರ್ಿಕ ಅಂತಃಶಕ್ತಿಯಿಂದ ದೇವರನ್ನು ಪೂಜಿಸಿದಾಗ ಇಷ್ಟಾರ್ಥ ಸಿದ್ಧಿಯಾಗುವುದು. ಹಿಂದುತ್ವ ಮಾನವತೆಯನ್ನು ಕಲಿಸಿಕೊಟ್ಟಿದೆ ಹೊರತು ಎಂದೂ ಸಹ ಆಕ್ರಮಣ, ಹಿಂಸೆಯನ್ನು ಕಲಿಸಿಕೊಡುವುದಿಲ್ಲ. ಮಾತೃಭೂಮಿ, ಧರ್ಮ, ಗೋರಕ್ಷಣೆ, ಹಿಂದೂ ಮಾತೆಯರ ಮಾನ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ಮಾನಸ ಸರೋವರ, ಕೈಲಾಸವನ್ನು ಚೀನಾದಿಂದ ಭಾರತಕ್ಕೆ ಹಿಂಪಡೆಯುವಲ್ಲಿ ನಾವೆಲ್ಲರೂ ಜಾಗೃತರಾಗಬೇಕಾಗಿದೆ, ವಿಶ್ವದ ಹಿಂದೂ ಧಾಮರ್ಿಕ ಶ್ರದ್ಧಾ ಕೇಂದ್ರಗಳ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕನ್ಯಾನ ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶೀಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಕೃತಿ ಪೂಜೆಯ ಮೂಲಕ ಗಣಪತಿ ಆರಾಧನೆ ನಡೆಯುತ್ತಿದೆ. ಮೃತ್ತಿಕೆಯ ಚೈತನ್ಯರೂಪಿ ಗಣನಾಯಕ ಈ ವಿಶ್ವಕ್ಕೆ ನಾಯಕ. ಪರಸ್ಪರ ಸಹಕಾರ ಇದ್ದಾಗ ಮಾತ್ರ ಗಣೇಶೋತ್ಸವದಂತಹ ಧಾಮರ್ಿಕ ಹಬ್ಬ ಯಶಸ್ವಿಯಾಗಿ ನಡೆಯುತ್ತದೆ. ಧರ್ಮ ಜಾಗೃತಿ, ರಾಷ್ಟ್ರ ಜಾಗೃತಿಗಾಗಿ ನಾವೆಲ್ಲರೂ ಒಟ್ಟು ಸೇರೋಣ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ.ರುಕ್ಮಯ್ಯ ಪೂಜಾರಿ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್, ತಾಲೂಕು ಪಂಚಾಯತಿ ಸದಸ್ಯ ದಿನೇಶ್ ಅಮ್ಟೂರು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಶ್ರೀಗುಡ್ಡೆ ಚಾಮುಂಡೇಶ್ವರಿ ಸೇವಾ ಟ್ರಸ್ಟ್ನ ಅಧ್ಯಕ್ಷ ವಿನೀತ್ ಶೆಟ್ಟಿ, ಗಣೇಶೋತ್ಸವ ಸಮಿತಿಯ ಶ್ರೀನಿವಾಸ ಆಳ್ವ ಪೆರಾಜೆಗುತ್ತು ಉಪಸ್ಥಿತರಿದ್ದರು.
ದಿವಾಕರ ಗೌಡ ಶಾಂತಿಲ ಸ್ವಾಗತಿಸಿದರು. ಉಮೇಶ್ ಎಸ್. ಪಿ ವಂದಿಸಿದರು. ಲಕ್ಷ್ಮೀಶ ಕಾರ್ಯಕ್ರಮ ನಿರೂಪಿಸಿದರು.


