ಸುದ್ದಿ9ಬಂಟ್ವಾಳ: ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಮ್ಡೇಲು ಪರಿಸರದಲ್ಲಿ ಜಿ.ಪಂ.ನ ಎರಡು ಲಕ್ಷ ರುಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಮೂರು ರಸ್ತೆಯನ್ನು ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ. ಶನಿವಾರ ಉದ್ಘಾಟನೆಗೊಳಿಸಿದರು.
ತೀರಾ ನಾದುರಸ್ತಿ ಸ್ಥಿತಿಯಲ್ಲಿದ್ದ ಕುಮ್ಡೇಲು 3ನೇ ಅಡ್ಡರಸ್ತೆ, ಕುಮ್ಡೇಲು 5ನೇ ಅಡ್ಡರಸ್ತೆ, ಹಾಗೂ ಕುಮ್ಡೇಲು -ಕಬೇಲಾ ಸಂಪರ್ಕ ರಸ್ತೆಯನ್ನು ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ.ಅವರ ಮುತುವಜರ್ಿಯಲ್ಲಿ ಕಾಂಕ್ರೀಟ್ರಸ್ತೆಯಾಗಿ ಅಭಿವೃದ್ದಿ ಪಡಿಸಲಾಗಿದ್ದು ಇಲ್ಲಿನ ಜನತೆಯ ಬಹು ದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ. ಗ್ರಾಮಸ್ಥರ ಸಹಕಾರದಿಂದ ಇಂತಹ ಮೂಲಭೂತ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗೆ ಯೋಜನೆಯೊಂದನ್ನು ಅನುಷ್ಟಾನಗೊಳಿಸಿ ಶಾಶ್ವತ ಪರಿಹಾರ ಕೈಗೊಳ್ಳಲಾಗಿದೆ ಎಂದರು. ಪುದು ಗ್ರಾ.ಪಂ.ಸದಸ್ಯರಾದ ಮನೋಜ್ ಆಚಾರ್ಯ ನಾಣ್ಯ, ಗೀತಾ, ಬಿಜೆಪಿ ಪುದು ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕೊಟ್ಟುಂಜ, ಕಾರ್ಯದಶರ್ಿ ಸುನೀಲ್ ಕುಮ್ಡೇಲು, ಬೂತ್ ಅಧ್ಯಕ್ಷ ಜಯನಂದ ನಾಯ್ಕ, ಜಗದೀಶ ಕುಮ್ಡೇಲು, ಅಶ್ರಫ್ ಫರಂಗಿಪೇಟೆ, ವಿಠಲ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಯೋಗಿಶ್, ಸೋಮನಾಥ ಕುಮ್ಡೇಲು ಹಾಜರಿದ್ದರು.

02

By suddi9

Leave a Reply

Your email address will not be published. Required fields are marked *