ಕಟೀಲು:ಭರತನಾಟ್ಯ ಎಂಬುದು ಕೇವಲ ಕಲಾವಿದರಿಗೆ ಮಾತ್ರವಲ್ಲದೆ ಸಮಗ್ರ ಸಮಾಜಕ್ಕೆ ಸಂಸ್ಕಾರ ರೂಪಿಸುವ ಶ್ರೇಷ್ಠ ಕಲೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ವೆಂಕಟರಮಣ ಅಸ್ರಣ್ಣ ಹೇಳಿದರು.

26kateelu bharatanatya
ಅವರು ಬಜಪೆಯ ಸಂಜೀವ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಾಟ್ಯ ನಿಲಯಂ ಮಂಜೇಶ್ವರ ಅವರ ಶಿಷ್ಯೆ ಶ್ರೇಯಾ ಶೆಟ್ಟಿ ಬಜಪೆ ಅವರ ನೃತ್ಯ ಸಮರ್ಪಣಂ-2018 ಭರತನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಭರತನಾಟ್ಯ ಎಂಬು ನಮ್ಮ ಸಂಸ್ಕೃತಿ, ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದರು.

ನಾಟ್ಯನಿಲಯಂ ಮಂಜೇಶ್ವರದ ಗುರು ಬಾಲಕೃಷ್ಣ ಮಂಜೇಶ್ವರ, ಶರ್ಮಿಳಾ ಬಾಲಕೃಷ್ಣ, ಕಾರ್ಯಕ್ರಮದ ಪ್ರಧಾನ ಸಂಚಾಲಕ ಕಿರಣ್ ಮಂಜೇಶ್ವರ, ಕಲಾವಿದೆ ಶ್ರೇಯಾ ಶೆಟ್ಟಿ ಅವರ ತಂದೆ ವರಪ್ರಸಾದ್ ಶೆಟ್ಟಿ ಹಾಗೂ ತಾಯಿ ಮಲ್ಲಿಕಾ ವಿ. ಶೆಟ್ಟಿ ಅವರುಗಳು ಉಪಸ್ಥಿತರಿದ್ದರು. ನಾಟ್ಯನಿಲಯಂನ ಗುರು ಬಾಲಕೃಷ್ಣ ಮಂಜೇಶ್ವರ ಹಾಗೂ ಇತರ ಹಿಮ್ಮೇಳ ಕಲಾವಿದರನ್ನು ವರಪ್ರಸಾದ್ ಶೆಟ್ಟಿ ದಂಪತಿ ಹಾಗೂ ಕಲಾವಿದೆ ಶ್ರೇಯಾ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ವರಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿ ಕಿರಣ್ ಕುಮಾರ್ ನೃತ್ಯ ಸಮರ್ಪಣಂ ಕಾರ್ಯಕ್ರಮದ ಬಗೆಗೆ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೃತ್ಯ ಸಮರ್ಪಣಂ ಕಾರ್ಯಕ್ರಮದ ಅಂಗವಾಗಿ ಶ್ರೇಯಾ ಶೆಟ್ಟಿ ಅವರು ಪುಷ್ಪಾಂಜಲಿಯಿಂದ ಪ್ರಾರಂಬಿಸಿ ಥಿಲ್ಲಾನದವರೆಗೂ ಹನ್ನೆರಡು ನೃತ್ಯ ವೈವಿಧ್ಯಗಳನ್ನು ಪ್ರದರ್ಶಿಸಿದರು.

By Suddi9

Leave a Reply

Your email address will not be published. Required fields are marked *