ವಿಟ್ಲ: ವ್ಯಕ್ತಿತ್ವವು ವಿಕಸನವಾಗುವುದು ಭಾಷಣಗಳನ್ನು ಕೇಳುದರಿಂದಲ್ಲ,ಬದಲಾಗಿ ನಮ್ಮನ್ನು ನಾವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮತನ ಬೆಳೆಯುತ್ತದೆ.ನಮ್ಮಲ್ಲಿ ಅನೇಕ ಕಲೆಗಳಿವೆ.ಅದು ನಮಗೆ ತಿಳಿದಿರುವುದಿಲ್ಲ.ಆ ಕಲೆಯನ್ನು ಅರಿಯುವುದೇ ವಿಕಸನ.ಅವುಗಳ ಅಭಿವೃದ್ದಿಗೆ ವೇದಿಕೆಯೊಂದು ಸಿಕ್ಕಾಗ ಅದು ಬೆಳೆದು ನಿಲ್ಲುತ್ತದೆ ಎಂದು ವಿಠಲ ವಿದ್ಯಾಸಂಘದ ಸಂಚಾಲಕರಾದ ಎಲ್.ಎನ್.ಕೂಡೂರು ಹೇಳಿದರು.ಅವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರನ್ನು ಉದ್ಘಾಟಿಸಿ ಮಾತನಾಡಿದರು.SHV_3479

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಬಿರಗಳ ಉಪಯೋಗವನ್ನು ತಿಳಿದುಕೊಂಡು ವೈಯಕ್ತಿಕವಾಗಿ ಬೆಳೆಯಬೇಕು ಎಂದರು.
ವೇದಿಕೆಯಲ್ಲಿ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ,ಸುಚೇತನ್ ಜೈನ್,ಉಪನ್ಯಾಸಕಿ ಪೂರ್ಣಿಮಾ ಉಪಸ್ಥಿತರಿದ್ದರು.ಬಳಿಕ ಸುಮಾರು 1 ಗಂಟೆಗಳ ಕಾಲ ಶಿಬಿರದ ಚಟುವಟಿಕೆಗಳು ನಡೆದವು.ಉಪನ್ಯಾಸಕ ಚಂದ್ರಕಾಂತ ಡಿ ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ಯಂ ವಂದಿಸಿ , ವಿದ್ಯಾರ್ಥಿನಿ ಜ್ಯೋತಿ ಆರ್ ಹೆಗ್ಡೆ ಪ್ರಾರ್ಥಿಸಿ , ವಿದ್ಯಾರ್ಥಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *