b-218x150

ಕಾಪು: ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಗ್ರಾಮೀಣ ಭಾಗದ ಜನರ ಅನುಕೂಲತೆಗಾಗಿ ಕೃಷಿ ಹಾಗೂ ಕೃಷಿಯೇತರ ವಸ್ತುಗಳ ಮಾರಾಟದ ಸಂತೆಯನ್ನು ವಾರದ ಪ್ರತಿ ಮಂಗಳವಾರ ಆರಂಭಿಸಲಾಗುವುದೆಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಇಂದು ಬೆಳಪುವಿನಲ್ಲಿ ವಾರದ ಸಂತೆಗೆ ಚಾಲನೆ ನೀಡಲಾಗಿದ್ದು, ಇದರಿಂದ ಬೆಳಪು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಗ್ರಾಮೀಣ ಭಾಗದ ಜನರು ತಮ್ಮ ದೈನಂದಿನ ವಸ್ತುಗಳ ಖರೀದಿಗಾಗಿ ಪೇಟೆಯನ್ನು ಅವಲಂಬಿಸಿರುವುದಾಗಿದ್ದು ಇದರಿಂದ ಸ್ಥಳೀಯವಾಗಿಯೇ ಎಲ್ಲಾ ವಸ್ತುಗಳು ದೊರಕುವುದರಿಂದ ಹಾಗೂ ರೈತರು ಬೆಳೆಸಿದ ಬೆಳೆಗಳಿಗೂ ನೇರ ಮಾರುಕಟ್ಟೆಯ ಅನುಕೂಲತೆ ಆಗಲಿದೆಯೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *