kateel

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ 4 ವರ್ಷಗಳಲ್ಲಿ ಸಮರ್ಥ ಆಡಳಿತ ನಡೆಸಿ ಅಭಿವೃದ್ಧಿಯಲ್ಲಿ ಅಮೆರಿಕವನ್ನೂ ಮೀರಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಬಣ್ಣಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ 150ಕ್ಕೂ ಹೆಚ್ಚು ದೇಶಗಳೊಂದಿಗೆ ಸ್ನೇಹ ಬಾಂಧವ್ಯ ವೃದ್ಧಿಯಾಗಿದೆ. ಸೈನಿಕ ಶಕ್ತಿ ಹೆಚ್ಚಳ, ಸರ್ಜಿಕಲ್‌ ಸ್ಟೈಕ್‌ನಂತಹ ಅಪೂರ್ವ ಕಾರ್ಯಕ್ರಮಗಳ ಮೂಲಕ ವಿಶ್ವಕ್ಕೆ ದೇಶದ ಮಿಲಿಟರಿ ಶಕ್ತಿಯನ್ನು ಪರಿಚಯಿಸುವ ಮೂಲಕ ಮೋದಿ ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.

4 ವರ್ಷಗಳಲ್ಲಿ 18,500 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, ಸ್ವತ್ಛ ಭಾರತ್‌ ಆಂದೋಲನ, 7.50 ಕೋಟಿ ಶೌಚಾಲಯ ನಿರ್ಮಾಣ, 3.80 ಕೋ. ಬಿಪಿಎಲ್‌/ಅಂತ್ಯೋದಯ ಕಾರ್ಡ್‌ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್‌ ಸಂಪರ್ಕ, 10 ಕೋಟಿ ಯುವಕರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಣೆ, 31.61 ಕೋಟಿ ಜನಧನ್‌ ಅಕೌಂಟ್‌, 5 ಲ.ರೂ. ವೆಚ್ಚ ಭರಿಸುವ ಮೋದಿಕೇರ್‌ ಆರೋಗ್ಯ ವಿಮೆ, ರಾಜ್ಯಕ್ಕೆ 3 ಲ.ಕೋ.ರೂ. ಅನುದಾನ ಹೀಗೆ ಹಲವಾರು ಜನೋಪಯೋಗಿ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಮೋದಿ ಸರಕಾರ ಜಾಗತಿಕವಾಗಿ ಗಮನ ಸೆಳೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಪ್ರ.ಕಾರ್ಯದರ್ಶಿ ಸುರೇಶ್‌ ನಾಯಕ್‌ ಕುಯಿಲಾಡಿ, ನವೀನ್‌ ಶೆಟ್ಟಿ ಕುತ್ಯಾರು, ಆರೆಸ್ಸೆಸ್ ಮಂಗಳೂರು ಪ್ರಭಾರಿ ಪ್ರತಾಪ್‌ಸಿಂಹ ನಾಯ್ಕ್ ಮತ್ತಿತರರಿದ್ದರು.

 

By Suddi9

Leave a Reply

Your email address will not be published. Required fields are marked *