ಬಂಟ್ವಾಳ: ಜೇಸಿಐ ಆಶ್ರಯದಲ್ಲಿ ವರ್ತಕರ ವಿವಿಧೊದ್ದೇಶ ಸಹಕಾರಿ ಸಂಘ ಹಾಗೂ ಯುನೈಟೆಡ್ ಟಿವಿಎಸ್ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಗಾರ ತಾಲೂಕಿನ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಬೇತಿ ಪಡೆಯುವ ಮೂಲಕ ವ್ಯಕ್ತಿ ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.
ಜೇಸಿಯ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜೆಸಿಐ ಬಂಟ್ವಾಳದ ಅಧ್ಯಕ್ಷ ದಯಾನಂದ ರೈ, ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಸಾಯಿರಾಧ ಟಿವಿಎಸ್ ನ ಸಂಚಾಲಕ ಶಿವಶಂಕರ್, ನಿಕಟಪೂರ್ವಾಧ್ಯಕ್ಷ ಡಾ.ಬಾಲಕೃಷ್ಣ ಕುಮಾರ್, ಕಾರ್ಯದರ್ಶಿ ಉಮೇಶ್ ಮೂಲ್ಯ ಉಪಸ್ಥಿತರಿದ್ದರು. ಜೇಸಿ ಸದಸ್ಯರಾದ ಲೋಕೇಶ್ ಸುವರ್ಣ, ಸುರೇಶ್ ಕುಮಾರ್ ನಾವೂರು, ರಾಜೆಂದ್ರ, ಪ್ರಸಾದ್, ಶ್ರೀನಿವಾಸ್ ಸಹಕರಿಸಿದರು.

