1 (8)

ಬಜ್ಪೆ: ಮುಂಡಾರು ಹಿಂದೂ ರುದ್ರ ಭೂಮಿಯಲ್ಲಿ ಯುವವಾಹಿನಿ ಬಜ್ಪೆ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ರವಿವಾರ ಇಲ್ಲಿನ ಸಮೀಪದ ಮುಂಡಾರಿನಲ್ಲಿ ನಡೆಯಿತು.

ಘಟಕದ ಸದಸ್ಯರಿಂದ ಇಲ್ಲಿನ ಹಿಂದೂ ರುದ್ರ ಭೂಮಿಯ ಪರಿಸರ ಸ್ವಚ್ಛಗೊಳಿಸಿ, ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.

ರಾಘವೇಂದ್ರ ಆಚಾರ್, ಮತ್ತು ಡಾ. ಜಯರಾಮ್ ಶೆಟ್ಟಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಸುಮಾರು 20 ವಿವಿಧ ಜಾತಿಯ ಸುಮಾರು 100 ಗಿಡಗಳನ್ನು ಈ ಪರಿಸರದಲ್ಲಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಶಿವರಾಮ್ ಪೂಜಾರಿ, ವಿಜಯ‌ ವಿಠಲ ಭಜನಾ ಮಂದಿರ ಬಜ್ಪೆ, ಗೋಪಾಲಕೃಷ್ಣ.ಕೆ., ದೇವರಾಜ್ ಅಮೀನ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಕಾರ್ಯದರ್ಶಿ ಸುನಿತಾ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಅಮೀನ್, ಜಗದಾಂಬಿಕ ಭಜನಾ ಮಂದಿರ ಶಾಂತಿಗುಡ್ಡೆಯ ಸದಸ್ಯರಾದ ಸುರೇಶ್, ಅಶ್ವಿನ್‌ ಪೂಜಾರಿ ಮುಂಡಾರು ಮತ್ತಿತರರು ಉಪಸ್ಥಿತರಿದ್ದರು.

3 (2)

By suddi9

Leave a Reply

Your email address will not be published. Required fields are marked *