Ramanath-Rai-Supporter

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ‌ಯವರ ಬೆಂಬಲಿಗನೋರ್ವ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ಪೇಟೆಯ ನಿತ್ಯಾನಂದ ಮಂದಿರದ ಬಳಿ ನಡೆದಿದೆ.

ಸುರೇಂದ್ರ ಬಂಟ್ವಾಳ್ ಎನ್ನುವ ಈತ ಲಾಂಗ್ ಹಿಡಿದು ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ್ದಾನೆ.

ಹಾಡು ಹಗಲೇ ಲಾಂಗನ್ನು ಬೀಸಿದ ಈತನ ದಾಳಿಗೆ ಸಿಲುಕಿ ಅಪಾಯಕ್ಕೆ ತುತ್ತಾಗುತ್ತಿದ್ದ ಗಣೇಶ್ ಮತ್ತು ಪುಷ್ಪರಾಜ್ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಬಗ್ಗೆ ಬಿ.ಸಿ.ರೋಡ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *