ಬಂಟ್ವಾಳ: ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿನ ಹಳೇ ಸುಣ್ಣದ ಗೂಡಿನ ಕಟ್ಟಡದಲ್ಲಿ ರವಿವಾರ ಮುಂಜಾನೆ ಘಟನೆ ನಡೆದಿದೆ.
ಮೃತರನ್ನು ರಾಯಚೂರು ಜಿಲ್ಲೆಯ ಚಿನ್ನೂರು ತಾಲೂಕು ಗುಂಡ ಗ್ರಾಮದ ಬೊಮ್ಮನ ಹಳ್ಳಿ ನಿವಾಸಿ ಗ್ಯಾನಪ್ಪ (25) ಎಂದು ಗುರುತಿಸಲಾಗಿದೆ.
ಗ್ಯಾನಪ್ಪ ಅವರು ರಾತ್ರಿ ವೇಳೆ ಊಟ ಮಾಡಿಮಲಗುವ ವೇಳೆ ತಲೆಯ ಬದಿ ಟೇಬಲ್ ಪ್ಯಾನ್ ಹಾಕಿ ಮಲಗಿದ್ದರು. ಬೆಳಗ್ಗೆ ಟೇಬಲ್ ಪ್ಯಾನ್ ಇವರ ತಲೆ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ಗ್ಯಾನಪ್ಪ ಅವರಿಗೆ ಹೆಂಡತಿ ಲಕ್ಷ್ಮಮ್ಮ ಹಾಗೂ 9 ತಿಂಗಳಿನ ಓರ್ವ ಪುತ್ರಿ ಇದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

