ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು `ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂತರ್ಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ (ಬೇರೆ ಬೇರೆ) ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತವನ್ನು ಆಚರಿಸಬೇಕು.

ಗಣೇಶಚತುಥರ್ಿಯ ಮಹತ್ವವೇನಿದೆ?
ಆಷಾಢ ಹುಣ್ಣಿಮೆಯಿಂದ ಕಾತರ್ಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರೀ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುದ್ಧ ಚತುಥರ್ಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.
ಈ ಲಹರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು `ಅಧ್ಯಾತ್ಮಶಾಸ್ತ್ರ : ಖಂಡ 10-ಹಬ್ಬ,ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.
ಗಣೇಶ ಚತುಥರ್ಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು?
ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂತರ್ಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುಥರ್ಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂತರ್ಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂತರ್ಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂತರ್ಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು 5:5:5 ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು 1:3:5 ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದ ವರೆಗೆ ಗ್ರಹಣ ಮಾಡಲಾರನು.
ಮೂರ್ತಿಯು ಭಗ್ನವಾದರೆ ಏನು ಮಾಡಬೇಕು?
ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವು ದಾದರೊಂದು ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂತರ್ಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೇವತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಮುರಿದರೆ ಆ ಮೂತರ್ಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂತರ್ಿಗೆ ಅಕ್ಷತೆಯನ್ನು ಅಪರ್ಿಸಿ ವಿಸಜರ್ಿಸಬೇಕು. ಈ ಘಟನೆಯು ಗಣೇಶ ಚತುಥರ್ಿಯ ದಿನವೇ ನಡೆದರೆ ಬೇರೆ ಮೂತರ್ಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂತರ್ಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂತರ್ಿಯು ಸಂಪೂರ್ಣ ಭಂಗವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ `ಅದ್ಭುತ ದರ್ಶನ ಶಾಂತಿ’ಯನ್ನು ಮಾಡಿಸಬೇಕು. ಗಣೇಶ ಚತುಥರ್ಿಯ ದಿನ ದೀಪಪತನ (ದೀಪ ಆರಿ ಹೋಗುವುದು), ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂತರ್ಿಭಂಗ ಇತ್ಯಾದಿ ಘಟನೆಗಳಾ ದರೆ ಆ ಕುಟುಂಬದಲ್ಲಿ ದ್ರವ್ಯಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆ ಇರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.
ಗಣೇಶ ಚತುಥರ್ಿಯಂದು ಚಂದ್ರದರ್ಶನ ನಿಷೇಧ!
ಚತುಥರ್ಿಯಂದು ಚಂದ್ರನನ್ನು ನೋಡಬಾರದು; ಏಕೆಂದರೆ ಚಂದ್ರನು ಮನಸ್ಸನ್ನು ಕಾರ್ಯ ಮಾಡಲು ಉದ್ಯುಕ್ತ ಮಾಡುವವನಾಗಿದ್ದಾನೆ. ಗ್ರಹಮಾಲೆಯಲ್ಲಿ ಚಂದ್ರನು ಚಂಚಲನಾಗಿದ್ದಾನೆ, ಅಂದರೆ ಅವನ ಗಾತ್ರವು ಹೆಚ್ಚುಕಡಿಮೆ ಆಗುತ್ತಿರುತ್ತದೆ; ಹಾಗೆಯೇ ಶರೀರದಲ್ಲಿ ಮನಸ್ಸು ಚಂಚಲವಾಗಿದೆ. ಈ ಮನಸ್ಸು ಉನ್ಮತ್ತವಾದಾಗ ತುಯರ್ಾವಸ್ಥೆ ಪ್ರಾಪ್ತವಾಗುತ್ತದೆ. (ತುಯರ್ಾವಸ್ಥೆ ಎಂದರೆ ಜಾಗೃತಿ, ಸ್ವಪ್ನ ಮತ್ತು ಸುಷುಪ್ತಿ (ಗಾಢ ನಿದ್ರೆ)ಇವುಗಳ ಮುಂದಿನ ಅವಸ್ಥೆ) ಸಂಕಷ್ಟಿಯಂದು ದಿನವಿಡೀ ಸಾಧನೆ ಮಾಡಿ ರಾತ್ರಿ ಚಂದ್ರದರ್ಶನ ಮಾಡುತ್ತಾರೆ. ಇದು, ಒಂದು ರೀತಿ ಸಾಧನೆ ಮುಗಿದಿರುವ ಹಾಗೂ ಮನಸ್ಸಿನ ಕಾರ್ಯವನ್ನು ನಿತ್ಯದಂತೆ ಪ್ರಾರಂಭಿಸುವುದರ ದರ್ಶಕವಾಗಿದೆ.
ಶ್ರೀಗಣೇಶ ಮೂರ್ತಿಯನ್ನು ನೀರಿನ ಟ್ಯಾಂಕಿಯಲ್ಲಿ ಅಲ್ಲ, ಹರಿಯುವ ನೀರಿನಲ್ಲಿ ವಿಸರ್ಜಿಸಿ!
ಇತ್ತೀಚೆಗೆ ಶ್ರೀ ಗಣೇಶಮೂತರ್ಿಗಳನ್ನು `ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀ ಗಣೇಶ ಮೂತರ್ಿಯನ್ನು ಹರಿಯುವ ನೀರಿನಲ್ಲಿ ಅಥವಾ ಜಲಾಶಯಗಳಲ್ಲಿ ವಿಸಜರ್ಿಸುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಪ್ರದೂಷಣೆ, ನೀರಿನ ಕೊರತೆ ಇತ್ಯಾದಿಗಳಿಂದಾಗಿ ಕೆಲವು ಜನರು ಮೂತರ್ಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯು ತ್ತಾರೆ. ಇದಕ್ಕೆ ಉಪಾಯವೆಂದು ಕಳೆದ ವರ್ಷ ರಾಜ್ಯ ಸರಕಾರವು ನೀರಿನ ಟ್ಯಾಂಕ್ವುಳ್ಳ ಲಾರಿಯನ್ನು ಮೂತರ್ಿ ವಿಸರ್ಜನೆಗೆ ಒದಗಿಸಿತ್ತು. ಇದು ಅಶಾಸ್ತ್ರೀಯ ಹಾಗೂ ತಪ್ಪಿದೆ. ಏಕೆಂದರೆ ಮೂತರ್ಿಯನ್ನು ಜಲಾಶಯದಲ್ಲಿಯೇ ವಿಸರ್ಜನೆ ಮಾಡಬೇಕು.
1. ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿ ಸಿದ ಶ್ರೀ ಗಣೇಶಮೂತರ್ಿಯು ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ!: ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂತರ್ಿ ಶಾಸ್ತ್ರಕ್ಕನುಸಾರ ಶ್ರೀ ಗಣೇಶನ ಮೂತರ್ಿಯು ಜೇಡಿಮಣ್ಣಿನಿಂದ ತಯಾರಿಸಿದ ಮತ್ತು ನೈಸಗರ್ಿಕ ಬಣ್ಣಗಳನ್ನು ಹಚ್ಚಿದ್ದಿರಬೇಕು. ಮೂತರ್ಿಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂತರ್ಿಯಲ್ಲಿ ಶ್ರೀ ಗಣೇಶತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕಷರ್ಿಸಿ ಭಾವಿಕ ರಿಗೆ ಅದರ ಲಾಭವಾಗುತ್ತದೆ. ಅಂದರೆ ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿದ ಯಾವುದೇ ವಿಷಯವು ನಿಸರ್ಗಕ್ಕೆ ಪೂರಕ ಅಂದರೆ ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ.
2.ಇಂತಹ ಮೂತರ್ಿ ವಿಸರ್ಜನೆ ಯಿಂದ ಜಲಪ್ರದೂಷಣೆಯಾಗದೇ ಆಧ್ಯಾತ್ಮಿಕ ಲಾಭವಾಗುವುದು : ಮೂತರ್ಿ ಯಲ್ಲಿರುವ ಚೈತನ್ಯದಿಂದ ಅದನ್ನು ಹರಿ ಯುವ ನೀರಿನಲ್ಲಿ ವಿಸರ್ಜನೆ ಮಾಡುವುದ ರಿಂದ ನೀರು ಪವಿತ್ರವಾಗುತ್ತದೆ. ಹರಿಯುವ ನೀರಿನಿಂದಾಗಿ ಈ ಪವಿತ್ರಕಗಳು ದೂರದ ವರೆಗೆ ಹೋಗುತ್ತವೆ ಮತ್ತು ಅನೇಕರಿಗೆ ಅದರ ಲಾಭವಾಗುತ್ತದೆ. ಈ ನೀರಿನ ಬಾಷ್ಪೀ ಭವನವಾಗುವುದರಿಂದ ವಾತಾವರಣ ಸಾತ್ತ್ವಿಕವಾಗಲು ಸಹಾಯವಾಗುತ್ತದೆ.
ಆಪತ್ಕಾಲದಲ್ಲಿ ಗಣೇಶನ ಮೂತರ್ಿ ಯನ್ನು ಹೇಗೆ ವಿಸರ್ಜಿಸಬೇಕು?
ಕೆಲವೊಂದು ಸ್ಥಳಗಳಲ್ಲಿ ಜಲಾಶಯಗಳಲ್ಲಿ (ಬಾವಿ, ಕೆರೆ, ನದಿ, ಹಳ್ಳ ಇತ್ಯಾದಿಗಳಲ್ಲಿ) ಗಣೇಶ ಮೂತರ್ಿಯ ವಿಸರ್ಜನೆಗೆ ಬೇಕಾ ಗುವಷ್ಟು ನೀರು ಇರುವುದಿಲ್ಲ. ಕೆಲವೊಮ್ಮೆ ಜಲಾಶಯಗಳಲ್ಲಿ ನೀರು ಕಲುಷಿತವಾಗಿರು ವುದರಿಂದ ಮೂತರ್ಿ ವಿಸರ್ಜನೆಗೆ ಯೋಗ್ಯ ವಾಗಿರುವುದಿಲ್ಲ. ಆಗ ಮುಂದಿನ ಎರಡು ಪ್ರಕಾರದ ಉಪಾಯಗಳನ್ನು ಮಾಡಬಹುದು.
1.ಮೂತರ್ಿಯನ್ನು ಪ್ರತಿಷ್ಠಾಪನೆ ಮಾಡದೇ ಅಡಿಕೆಯನ್ನು ಇಟ್ಟು ಪೂಜಿಸ ಬೇಕು. ಅಡಿಕೆಯನ್ನು ಸ್ವಲ್ಪ ನೀರಿರುವ ಬಾವಿ ಅಥವಾ ಹಳ್ಳದಲ್ಲಿ ವಿಸಜರ್ಿಸಬಹುದು.
2.ಶ್ರೀ ಗಣೇಶ ಚತುಥರ್ಿಗಾಗಿ ಧಾತುವಿನ (ಲೋಹದ) ಒಂದು ಹೊಸ ಮೂತರ್ಿಯನ್ನು ತಂದು ಅದಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು. ವಿಸರ್ಜನೆ ಸಮಯದಲ್ಲಿ ಇಂತಹ ಮೂತರ್ಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆ ಇರುವುದಿಲ್ಲ, ಉತ್ತರ ಪೂಜೆಯಾದ ನಂತರ ಗಣಪತಿಯ ಕೈಯ ಮೇಲೆ
ಅಕ್ಷತೆಯನ್ನು ಹಾಕಿ ಮೂತರ್ಿಯನ್ನು ಬಲಗೈಯಿಂದ ಆ ಸ್ಥಳದಿಂದ ಸ್ವಲ್ಪ ಸರಿಸಬೇಕು. ಅನಂತರ ಮೂತರ್ಿಯನ್ನು ಮನೆಯಲ್ಲಿನ ಯಾವು ದಾದರೊಂದು ಪವಿತ್ರ ಸ್ಥಳದಲ್ಲಿ ಇಡಬೇಕು. ಉತ್ತರಪೂಜೆಯ ನಂತರ ಆ ಮೂತರ್ಿಯ ಲ್ಲಿನ ದೈವತ್ವವೂ ವಿಸಜರ್ಿಸಲ್ಪಡುತ್ತದೆ. ಆದು ದರಿಂದ ಇಂತಹ ಮೂತರ್ಿಯ ಪೂಜೆ ಯನ್ನು ಪ್ರತಿದಿನ ಮಾಡಬೇಕಾಗಿಲ್ಲ. ಮುಂದಿನ ವರ್ಷ ಮತ್ತೆ ಈ ಮೂತರ್ಿಯ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಮಾಡಬಹುದು.
ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಸಾಧನೆಯೇ ಆಗಿದೆ!
ಇತ್ತೀಚೆಗೆ ದೇವತೆಗಳನ್ನು ವಿವಿಧ ರೀತಿಯಲ್ಲಿ ವಿಡಂಬನೆ ಮಾಡಲಾಗುತ್ತಿದೆ. ಉದಾ. ಹಿಂದೂ ದ್ವೇಷಿ ಚಿತ್ರಕಾರ ಮ.ಫಿ.ಹುಸೇನನು ಹಿಂದೂಗಳ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಅವುಗಳನ್ನು ಸಾರ್ವಜನಿಕವಾಗಿ ಮಾರಾಟಕ್ಕೆ ಇಟ್ಟಿದ್ದನು. ವ್ಯಾಖ್ಯಾನಗಳು, ಪುಸ್ತಕಗಳು ಮುಂತಾದ ಮಾಧ್ಯಮಗಳಿಂದ ದೇವತೆಗಳನ್ನು ಟೀಕಿಸಲಾಗುತ್ತಿದೆ. ವ್ಯಾಪಾರದ ಉದ್ದೇಶದಿಂದ ಜಾಹೀರಾತುಗಳಿಗಾಗಿ ದೇವತೆಗಳನ್ನು `ಮಾಡೆಲ್’ ಎಂದು ಉಪಯೋಗಿ ಸಲಾಗುತ್ತಿದೆ. ದೇವತೆಗಳನ್ನು ಈ ರೀತಿ ವಿಡಂಬನೆ ಮಾಡಿದರೆ ಅದು ಶ್ರದ್ಧೆಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಇದು ಧರ್ಮಹಾನಿಯಾಗಿದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಅವಶ್ಯಕವಾದಂತಹ ದೇವತೆಯ ಸಮಷ್ಟಿ ಸ್ತರದಲ್ಲಿನ ಉಪಾಸನೆಯೇ (ಸಾಧನೆ) ಆಗಿದೆ.
(ಹೆಚ್ಚಿನ ಮಾಹಿತಿಗಾಗಿ ಸನಾತನವು ಪ್ರಕಾಶಿಸಿದ `ಗಣಪತಿ’ ಈ ಗ್ರಂಥವನ್ನು ಓದಿ)
ಸಂಪರ್ಕ : 7204082640
