download

ಕಲಬುರ್ಗಿ: ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಡಿಸಿಐಬಿ ಮಹಿಳಾ ಪೇದೆಯೋರ್ವರು ಮೃತಪಟ್ಟ ಘಟನೆ ಕಲಬುರ್ಗಿಯ ಸಾಯಿ ಮಂದಿರದ ಬಳಿ ನಡೆದಿದೆ.

ಮೃತರನ್ನು ಡಿಸಿಐಬಿ ಮಹಿಳಾ ಪೇದೆ ಸುಜಾತ ರಾಠೋಡ ಎಂದು ಗುರುತಿಸಲಾಗಿದೆ.

ಸುಜಾತ ಅವರು ತಮ್ಮ ಮನೆಯಲ್ಲಿ ವಾಶಿಂಗ್ ಮೆಷೀನ್ ಚಾಲು ಮಾಡಲು ಯತ್ನಿಸಿದ ಸಂದರ್ಭ ವಿದ್ಯುತ್ ಶಾಕ್ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರಕರಣ ಕಲಬುರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *