6 Svpur Ph-1

ಶ್ರೀನಿವಾಸಪುರ: ಪುರಸಭೆಯ ತೆರವಾದ ಸ್ಥಾನ 12ನೇ ವಾರ್ಡ್‍ಗೆ ಜೂನ್ 18ರಂದು ನಡೆಯುವ ಉಪ ಚುನಾವಣೆಗೆ 5 ಮಂದಿ ನಾಮಪತ್ರಗಳನ್ನು  ಸಲ್ಲಿಸಿದ್ದಾರೆ.

ಶ್ರೀನಿವಾಸಪುರ ಪುರಸಭೆಯ 23 ವಾರ್ಡುಗಳ ಪೈಕಿ 12ನೇ ವಾರ್ಡಿನ ಸೈಯದ್ ಮುಕ್ತಿಯಾರ್ ರವರು ನಿಧನ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ ಇದೇ ತಿಂಗಳು 18ರಂದು ಚುನಾವಣೆ ನಡೆಯಲಿದೆ. ವಿಧಾನ ಸಭಾ ಚುನಾವಣೆ ನಂತರ ಜೂನ್ 8ರಂದು ಆಗ್ನೇಯ ಶಿಕ್ಷಕರ ಚುನಾವಣೆ ನಂತರ ಪುರಸಭೆಯ ತೆರವಾದÀ ಸ್ಥಾನಕ್ಕೆ ಇದೇ 18ರಂದು ಉಪ ಚುನಾವಣೆ ನಡೆಯಲಿದೆ ಇದರಿಂದ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಕಾಣಿಸಿಕೊಂಡಿವೆ.

ಸಂಬಂದಿಸಿದಂತೆ ಪುರಸಭೆಯ ಉಪಚುನಾವಣೆಯಲ್ಲಿ ತೆರವಾದ 12 ವಾರ್ಡಿಗೆ ಹಿಂದುಳಿದ ವರ್ಗಗಳ (ಎ) ಮೀಸಲಾತಿ ಹೊಂದಿದ್ದು ನಾಮಪತ್ರಗಳ ಸಲ್ಲಿಸಲು ಜೂನ್ 6ರಂದು ಕೊನೆಯ ದಿನವಾದ ಬುಧವಾರದವರಿಗೆ 5ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದವರಲ್ಲಿ ಆರ್.ಇಮ್ರಾನ್ ಬಿನ್ ರೋಷನ್ ಜಮೀರ್ ಪಾಷಾ, ಆರ್.ಚಾಂದ್‍ಪಾಷಾ ಬಿನ್ ಲೇಟ್ ಬಷೀರ್, ಸೈಯದ್ ಲಿಯಾಖತ್ ಬಿನ್ ಪಟೇಲ್ ಆರ್.ಸೈಯದ್ ಇಸ್ಮಾಯಿಲ್, ಷೇಕ್‍ಷಫೀವುಲ್ಲಾ ಬಿನ್ ಅಬ್ದುಲ್ ಖಾಲಕ್, ಸೈಯದ್‍ತಾರೀಖ್ ಇಸ್ಮಾಯಿಲ್ ಬಿನ್ ಪಟೇಲ್ ಆರ್. ಸೈಯದ್ ಇಸ್ಮಾಯಿಲ್ ರವರು ನಾಮಪತ್ರಗಳನ್ನು ಸಲ್ಲಿಸಿದವರಾಗಿದ್ದಾರೆ.

ಜೂನ್ 7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅದೇ ರೀತಿ ಜೂನ್ 9ರಂದು ನಾಮಪತ್ರಗಳ ಹಿಂತೆಗೆದುಕೊಳ್ಳಲು ಹಾಗು ಅದೇ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಹಾಗು ತಹಶೀಲ್ದಾರರರಾದ ಎನ್.ಎಸ್.ಪ್ರಶಾಂತ್ ರವರು ತಿಳಿಸಿದ್ದಾರೆ.

ಅಂತಿಮ ದಿನವಾದ ಬುಧವಾರ ಸಯದ್ ಲಿಯಾಕತ್ ರವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಯದ್ ಸಿಬಕತ್‍ಉಲ್ಲಾ, ಸಯದ್‍ಅಹಮದಿ, ರಹಮತ್‍ಉಲ್ಲಾ, ಪರಮನ್‍ಬೇಗ್ ಇತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *