ಕೋಲಾರ: ಸರ್ಕಾರಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಸರ್ಕಾರದ ಜತೆ ಸಂಘ-ಸಂಸ್ಥೆ, ದಾನಿಗಳ ನೆರವೂ ದೊರೆತಾಗ ಶೈಕ್ಷಣಿಕ ಕ್ರಾಂತಿ ಆಗುತ್ತದೆ. ಶಿಕ್ಷಣದ ಬೆಳಕನ್ನು ಪ್ರತಿಯೊಬ್ಬರೂ ಪಡೆಯಲು ನೆರವಾದಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೊಸ ಬಡಾವಣೆ ಸರ್ಕಾರಿ ಶಾಲೆಗೆ ಪ್ಯೂಚರ್ ಇಂಡಿಯಾ ಟ್ರಸ್ಟ್ ವತಿಯಿಂದ ನೀಡಿರುವ ಸೌಲಭ್ಯಗಳನ್ನು ಸಮರ್ಪಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನಾ ಸಿಬ್ಬಂದಿ ಇದ್ದು, ಕಾಲಕಾಲಕ್ಕೆ ತರಬೇತಿಗಳ ಮೂಲಕ ಅಧ್ಯಯನಶೀಲರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಜ್ಞಾನ ತುಂಬುತ್ತಿದ್ದಾರೆ. ಸರ್ಕಾರ ನಿಡುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಪ್ಯೂಚರ್ ಇಂಡಿಯಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್‍ರವರು 2 ಲಕ್ಷ 60 ಸಾವಿರ ವೆಚ್ಚದಲ್ಲಿ ನೆಲಹಾಸು ಸೇರಿದಂತೆ ಶಾಲಾ ಭೌದಿಕ ಸೌಲಭ್ಯ ನೀಡಿರುವುದು ಸುತ್ಯಾರ್ಹ ಸಂಗತಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ. ರಾಮಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ಕಲಿವಿನ ಹಸಿವು ಹೊಂದಬೇಕು ಎಂದು ನುಡಿದರು.
ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್ ಮಾತನಾಡಿ, ವಿದ್ಯಾರ್ಥಿ ಶಿಕ್ಷಣ ನಡುವೆ ಪೋಷಕರು, ದಾನಿಗಳು ಶಾಲೆಯ ಅಭಿವೃದ್ಧಿಗೆ ನೆರವಾಗಬೇಕು ಎಂದರು.
ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದು ನಿಜಕ್ಕೂ ಶಿಕ್ಷಕರ ಸಾಧನೆಯಾಗಿದೆ ಎಂದು ಪ್ರಸಂಶಿಸಿದರು.
ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಕೋಳಿ ನಾರಾಯಣಸ್ವಾಮಿ ಮತನಾಡಿ, ಈ ವರ್ಷವೂ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಉಚಿತ ಸೌಲಭ್ಯಗಳನ್ನು ವಿತರಿಸಲಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ, ಖಜಾಂಚಿ ಚಂದ್ರಪ್ಪ, ಶಾಲಾ ಮುಖ್ಯೋಪಾದ್ಯಾಯಿನಿ ಪ್ರಭಾವತಿ, ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಸ್ಕೌಟ್ಸ್ ಅಂಡ್ ಗೈಡ್ಸ್ ತಾಲ್ಲೂಕು ಅಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.



