7 Svpur Ph-2

ಶ್ರೀನಿವಾಸಪುರ: ಇಂದು (ಜೂ.8) ಆಗ್ನೇಯ ಶಿಕ್ಷಕರ ಚುನಾವಣೆ ನಡೆಯಲಿದ್ದು,  545 ಮಂದಿ ಮತದಾರರು 14 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಆಗ್ನೇಯ ಶಿಕ್ಷಕರ ಚುನಾವಣೆಗೆ ಪುರುಷರು 383 ಮಹಿಳೆಯರು 162 ಸೇರಿ ಒಟ್ಟು 545 ಮಂದಿ ಮತದಾರರಿದ್ದಾರೆ.

ಶಿಕ್ಷಕರು ಮತ ಚಲಾವಣೆ ಮಾಡಲು ಮತಗಟ್ಟೆ ಸಂಖ್ಯೆ 26 ರನ್ನು ತಾಲ್ಲೂಕು ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮತದಾನ ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರಿಗೆ ನಡೆಯಲಿದೆ.

ಚುನಾವಣೆ ನಡೆಯಲು ಕೇವಲು ಗಂಟೆಗಳು ಬಾಕಿ ಇರುವುದರಿಂದ ಚುನಾವಣೆ ಮುನ್ನಾದಿನ ಮತಗಟ್ಟೆ ಕೇಂದ್ರದ ಮುಂದಿನ ರಸ್ತೆಯಾದ ಎಂ.ಜಿ.ರಸ್ತೆಯಲ್ಲಿ ಮುಂಗಡವಾಗಿ ಆಯಾ ಅಭ್ಯರ್ಥಿಗಳ ಪರ ಪೆಂಡ್ಯಾಲ್ ಹಾಕಲಾಗಿದೆ.  ಸದರಿ ಸ್ಥಳದಲ್ಲಿ ಮತದಾರನ್ನು ಸೆಲೆಯಲು ಹಾಗು ಮತಪಟ್ಟಿಯಲ್ಲಿನ ಕ್ರಮ ಸಮಖ್ಯೆ ತಿಳಿಸಲು ಆಯಾ ಅಭ್ಯರ್ಥಿಗಳ ಪರ ಪೆಂಡ್ಯಾಲ್ ಹಾಕಲಾಗಿದೆ. ಅದೇ ರೀತಿ ಮತದಾರರನ್ನು ಸೆಳೆಯುವ ಉದ್ದೇಶದಲ್ಲಿ ಅಭ್ಯರ್ಥಿಗಳು ಒಂದೆರಡು ಸುತ್ತಿನ  ಪ್ರಚಾರ ಮಾಡಿ ಮತದಾರರನ್ನು ಬೇಟಿಯಾಗಿದ್ದಾರೆ. ಅಲ್ಲದೇ ಗೆಲುವಿಗಾಗಿ ತೆರೆಮರೆಯಲ್ಲಿ ಆಸೆ ಅಮಿಷಗಳ ಮಹಾಪೂರ ಹರಿದಿದೆಯಾದರೂ ಮತದಾರ ಶಿಕ್ಷಕರು ಈ ಬಗ್ಗೆ ಗುಟ್ಟಾಗಿ ಉಳಿಸಿಕೊಂಡಿದ್ದಾರೆ.

ಯಾವುದೇ  ಚುನಾವಣೆಗಳು ಶ್ರೀನಿವಾಸಪುರದಲ್ಲಿ ನಡೆದರೂ ಒಂದು ರೀತಿಯ ಕುತೂಹಲ ಇದ್ದೇ ಇರುತ್ತದೆ ಬಹಳಷ್ಟು ರಾಜಕೀಯ ಚುನಾವಣೆಗಳು ಹಾಗು ಸ್ಥಳೀಯ ಕ್ಷೇತ್ರದ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ಶಿಕ್ಷಕರ ಕ್ಷೇತ್ರದ ಚುನಾವಣೆಯು ಸಹ ಅಬ್ಬರದ ನಡುವೆ ನಡೆಯಲಿರುವುದು ಕೇಳುವಂತಾಗಿದೆ ರೀತಿ ಆಯಾ ಅಭ್ಯರ್ಥಿಗಳ ಪರ ಈ ಕ್ಷೇತ್ರದ ಶಿಕ್ಷಕ ಪ್ರತಿನಿಧಿಗಳು ಬ್ಯಾಟಿಂಗ್ ಹಿಡಿದು ಗೆಲುವಿನ ಕಸರತ್ತಿನಲ್ಲಿ ಮತದಾರರನ್ನು ಓಲೈಸುವಲ್ಲಿ ಕೆಲಸ ಮಾಡಿದ್ದಾರೆ. ಮತ್ತೊಂದಡೆ ಯಾವುದೇ  ರಾಜಕೀಯ ಚುನಾವಣೆಗಳು ನಡೆದರೂ ಸಹ  ಆ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಪಕ್ಷ ಅಥವಾ ತಮ್ಮ ಅಭ್ಯರ್ಥಿಪರ ಶಿಕ್ಷಕರು ಸಹ ತೆರೆಮರೆಯಲ್ಲಿ ಕೆಲಸ ಮಾಡುವ ಜೊತೆ ಜನಪ್ರತಿನಿಧಿಗಳಂತೆ ಪೋಜು ಕೊಡುವ ಸಂದರ್ಭಗಳು ಸಾಕಷ್ಟು ಇವೆ ಹಾಗಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಹ ತಮ್ಮ ಪಕ್ಷ ಅಥವಾ ಅಭ್ಯರ್ಥಿಗಳ ಪರ ಮತಪಟ್ಟಿ ಹಿಡಿದು ಮತಯಾಚನೆ ಮಾಡುತ್ತಾ ಬಂದಿದ್ದಾರೆ.

ಇದೀಗ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಶುಕ್ರವಾರ ನಡೆಯಲಿದೆ. ಆಗಾಗಿ ಕೆಲವು ಶಿಕ್ಷಕರು ಗರಿಗೆದರಿಕೊಂಡು ಚುನಾವಣೆಗೆ ತಮ್ಮ ವರ್ಚಸ್ಸು ಪ್ರದರ್ಶನ ಮಾಡಲಿದ್ದಾರೆ ಎನ್ನುವುದು ಮತದಾನ ದಿನ ಕಂಡುಬರುವ ಸನ್ನಿವೇಶ ಸಹ ಕಾಣಬಹುದಾಗಿದೆ. ಈಗಾಗಲೇ ಇಲ್ಲಿನ ಶಿಕ್ಷಕರು ಹಾಗು ಆಯಾ ಪಕ್ಷಗಳ ಕಾರ್ಯಕರ್ತರು ಸಹ ಶಿಕ್ಷಕರು ತಮ್ಮ ಅಭ್ಯಥಿಗಳಿಗೆ ಮತದಾನ ಮಾಡಲು ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಆದರೂ ಏನೆಲ್ಲಾ ಕಸರತ್ತು ಆಮಿಷ, ಆಸೆ ಒಡ್ಡಿದರೂ ಶಿಕ್ಷಕರು ತಮ್ಮ ಅಭಿಮಾನದಲ್ಲಿ ಉಳಿದವರಿಗೆ ಮಾತ್ರ ಮತ ನೀಡಲಿದ್ಧಾರೆನ್ನುವುದು ಜನವಲಯದಲ್ಲಿ ಕೇಳಿಬರುವಂತಾಗಿದೆ. ಇದರ ಜೊತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳ ಬದಲಾವಣೆಯಾದರೂ 40 ವರ್ಷಗಳ ರಾಜಕೀಯ ಎದುರಾಳಿಗಳಾದ ಕೆ.ಆರ್.ರಮೇಶ್‍ಕುಮಾರ್ ಹಾಗು ಜಿ.ಕೆ.ವೆಂಕಟಶಿವಾರೆಡ್ಡಿ ರವರ ವರ್ಚಸ್ಸು ಸಹ ಮತದಾರರ ಮೇಲೆ ಪ್ರಭಾವ ಬೀರಲಿದೆ ಎನ್ನುವಂತಾಗಿದೆ.

ಆದರೂ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಶಿಕ್ಷಕ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ ಇದಕ್ಕಾಗಿ ತಾಲ್ಲೂಕಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿಗಳು ನಾಳಿನ ದಿನಕ್ಕಾಗಿ ಕಾಯುವಂತಾಗಿದೆ.

.

By suddi9

Leave a Reply

Your email address will not be published. Required fields are marked *