ಮುಂಬೈ: ಹೆಚ್ಚುತ್ತಿರುವ ಖೋಟಾನೋಟುಗಳ ಹಾವಳಿ ತಡೆಗಟ್ಟಲು ರಿಸರ್ವ್ ಬ್ಯಾಂಕ್ ಇಂಡಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಕಾಗದದ ನೋಟುಗಳ ಜಾಗದಲ್ಲಿ ಹಲವು ಸೆಕ್ಯೂರಿಟಿ ಅಂಶಗಳನ್ನೊಳಗೊಂಡ ಪ್ಲಾಸ್ಟಿಕ್ ನೋಟುಗಳನ್ನ ಪರಿಚಯಿಸಲು ನಿರ್ಧರಿಸಿದೆ.
ಜೊತೆಗೆ ನೋಟುಗಳ ಬಾಳಿಕೆಯನ್ನ ಹೆಚ್ಚಿಸುವುದು ರಿಸರ್ವ್ ಬ್ಯಾಂಕ್’ನ ಮತ್ತೊಂದು ಪ್ರಮುಖ ಉದ್ದೇಶ. 2013-14ರ ವಾರ್ಷಿಕ ವರದಿಯಲ್ಲಿ ರಿಸರ್ವ್ ಬ್ಯಾಂಕ್ ಈ ಹೊಸ ಯೋಜನೆಯನ್ನ ಪ್ರಸ್ತಾಪಿಸಿದೆ. ಮುಂದಿನ ವರ್ಷದ ಜನವರಿಯಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ನೋಟುಗಳನ್ನ ಪರಿಚಯಿಸಲು ರಿಸರ್ವ್ ಬ್ಯಾಂಕ್ ಉದ್ದೇಶಿಸಿದೆ.

