ವಿಟ್ಲ: ಈಜಲು ತೆರಳಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ಎಂಬಲ್ಲಿ ರವಿವಾರ ನಡೆದಿದೆ.
ಮೃತ ಬಾಲಕನನ್ನು ಪಿಲಿಂಜ ನಿವಾಸಿ, ಪುಣಚ ಶಾಲೆಯ 8 ತರಗತಿ ವಿದ್ಯಾರ್ಥಿ ದಕ್ಷಣ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೂವರು ಬಾಲಕರು ಜತೆಯಾಗಿ ಆಟ ಆಡಲೆಂದು ಬಾವಿ ಬಳಿ ತೆರಳಿದ್ದು, ಬಳಿಕ ನೀರಾಟವಾಡುವ ಮನಸ್ಸಾಗಿ ಇಬ್ಬರು ಬಾಲಕರು ಬಾವಿಗೆ ಇಳಿದಿದ್ದರು. ಆದರೆ ನೀರಾಟವಾಡುವ ಸಂದರ್ಭ ವಿದ್ಯಾರ್ಥಿ ದಕ್ಷಣ್ ಮುಳುಗಲಾರಂಭಿಸಿದ್ದಾರೆ . ಇದನ್ನು ಗಮನಿಸಿದ ಆತನ ಸ್ನೇಹಿತರು ಸಹಾಯಕ್ಕಾಗಿ ಕಿರುಚಲಾರಂಭಿಸಿದ್ದಾರೆ. ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಬಾಲಕ ದಕ್ಷಣ್ ಅದಾಗಲೇ ಸಾವನಪ್ಪಿದ್ದು, ಮತ್ತೊರ್ವನನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.

