ವಿಟ್ಲ: ಕರ್ನಾಟಕ ಶಿಕ್ಷಣ ಮಂಡಳಿ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಚಿತ್ರಕಲಾಗ್ರೇಡ್ ಪರೀಕ್ಷೆಯಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ.
ಈ ಪರೀಕ್ಷೆಯಲ್ಲಿ ಶಾಲೆಯ 8ನೇ ತರಗತಿಯಿಂದ 9 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಶಿಷ್ಟ ಶ್ರೇಣಿ-1, ದ್ವಿತೀಯ ಶ್ರೇಣಿ – 1, ಪ್ರಥಮ ಶ್ರೇಣಿ 7 ಸ್ಥಾನವನ್ನು ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಚಿತ್ರಕಲಾ ಅಧ್ಯಾಪಕ ರುಕ್ಮಯ್ಯಗೌಡ ಶರಂತಿಮಠ ಅವರು ತರಬೇತುಗೊಳಿಸಿದ್ದರು.

