ವಿಟ್ಲ :ಅಧ್ಯಾಪಕರ ಸಹಕಾರಿ ಸಂಘ ನಿಯಮಿತ ವಿಟ್ಲ ಇದರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ವಿಟ್ಲದ ಪ್ರಧಾನ ಕಛೇರಿಯಲ್ಲಿ 10-03-2018 ರಂದು ನಡೆಯಿತು. ಅಧ್ಯಕ್ಷರಾಗಿ ಪೂಂಜಾಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ ಮೋನಪ್ಪ ಮತ್ತು ಉಪಾಧ್ಯಕ್ಷರಾಗಿ ಅಳಿಕೆ ಶ್ರೀ ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಂದ್ರ ರೈ ಪಿ ಇವರು ಆಯ್ಕೆಯಾದರು. teachers

ಚುಣಾವಣಾಧಿಕಾರಿಯಾಗಿ ತ್ರಿವೇಣಿ ಕೆ ರಾವ್ ಅಭಿವೃದ್ಧಿ ಅಧಿಕಾರಿ ಬಂಟ್ವಾಳ ಇವರು ಚುನಾವಣೆ ನಡೆಸಿದರು. ನಿಕಟ ಪೂರ್ವ ಅಧ್ಯಕ್ಷ ಕೆ ರಮೇಶ್ ನಾಯಕ್ ಸ್ವಾಗತಿಸಿದರು. ಟಿ ಶೇಷಪ್ಪ ಮೂಲ್ಯ ವಂದಿಸಿದರು. ಜನರಲ್ ಮ್ಯಾನೇಜರ್ ಕೃಷ್ಣಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *