ವಿಟ್ಲ :ಉಕ್ಕುಡ ದರ್ಬೆ ಯುವಜನ ಸೇವಾ ಟ್ರಸ್ಟ್ ಇದರ ನಾಲ್ಕನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದರ್ಬೆಯ ವಿಶ್ವಕರ್ಮ ಸಮಾಜ ಸೇವಾ ಸಮಿತಿಯ ಸಮುದಾಯ ಭವನದಲ್ಲಿ 10-03-2018 ರಂದು ರಾತ್ರಿ ನಡೆಯಿತು.
ಮಡಿಯಾಲ ದೇವಸ್ಥಾನದ ಬಿ ಗಣೇಶ್ ಮಯ್ಯ ರವರ ಪೌರೋಹಿತ್ಯದಲ್ಲಿ ನಡೆದ ಪೂಜೆಯಲ್ಲಿ ವಿಟ್ಲದ ಉದಯೇಶ ಕೆದಿಲಾಯ ಕಥಾ ವಿವರಣೆ ನೀಡಿದರು. ಯುವಜನ ಸೇವಾ ಟ್ರಸ್ಟ್ ನ ಮತ್ತು ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಊರವರು ಭಾಗವಹಿಸಿದ್ದರು.
