ವಿಟ್ಲ : ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕಲಾ ಸಂಗಮ” ಬೇಸಗೆ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಸೋಮವಾರ ಉದ್ಘಾಟಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆರ್ಥರ್ ‘ಡಿ’ ಸೋಜಾ (ಮಾಜಿ ಅಂತರಾಷ್ಟ್ರೀಯ ವೆಯ್ಟ್ ಲಿಫ್ಟರ್) ಮಾತನಾಡಿ ಕಠಿಣ ಶ್ರಮದಿಂದ ಮಾತ್ರ ನಾವು ಉತ್ತಮ ಸಾಧನೆಗೈಯಲು ಸಾಧ್ಯ. ಪ್ರತಿಭೆಗೆ ಮತ ಧರ್ಮಗಳ ಅಡ್ಡಗೋಡೆಯಿಲ್ಲ ಎಂದರು. ಗಾನಸಿರಿ ಸಂಗೀತ ಸಂಸ್ಥೆಯ ಸಂಸ್ಥಾಪಕ ಕಿರಣ್ ಕುಮಾರ್ ಮಾತನಾಡಿ ಸಂಗೀತ ಒಂದು ರೀತಿಯ ಆಟ ನಮ್ಮನ್ನು ಸದಾ ಸಂತೋಷವಾಗಿರಿಸುವುದು ಎಂದರು. ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ತರಬೇತುದಾರ ವಸಂತ್ ರೈ ಕಲ್ಲಾಜೆ ಮಾತನಾಡಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರಬೇಕಾಗಿದೆ, ಅದಕ್ಕೆ ಪೋಷಕರು ಶಿಕ್ಷಕರು ಹಾಗೂ ಸಮಾಜದ ಎಲ್ಲರ ಪ್ರೋತ್ಸಾಹವೂ ಅಗತ್ಯವಾಗಿದೆ ಎಂದರು. ಆಡಳಿತಾಧಿಕಾರಿ ಹಾಗೂ ಸಮಾರಂಭದ ಅಧ್ಯಕ್ಷರಾದ ಸಿ.ಶ್ರೀಧರ್ ಮಾತನಾಡಿ ಕಲಾ ಸೇವೆಯನ್ನು ಒದಗಿಸುವ ಪ್ರಯತ್ನ ನಾವು ಮಾಡಿದ್ದೇವೆ ಇದನ್ನು ಯಶಸ್ವಿಯಾಗಿಸುವ ಜವಬ್ದಾರಿ ನಿಮ್ಮದು ಎಂದರು.IMG-20180402-WA0007

IMG-20180402-WA0004
ಇತರ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಧನಂಜಯ ಮರ್ಕಂಜೆ (ಕಾರ್ಯಶಿಕ್ಷಣ) , ಸೂರ್ಯಕಾಂತ್ (ಚಿತ್ರಕಲೆ) ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ.ವಿ.ಶೆಟ್ಟಿ ಸ್ವಾಗತಿಸಿ , ಸಹ ಶಿಕ್ಷಕಿಯರಾದ ಶುಭಾ.ಕೆ. ವಂದಿಸಿದರು , ಮಮತಾ ಎನ್. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *