ಕೈಕಂಬ:ಅಟೋ ರಿಕ್ಷಾ ಪಲ್ಟಿಯಾಗಿ ಯಾಗಿ ಚಾಲಕ ಮೃತಪಟ್ಟ ಘಟನೆ ಕಿನ್ನಿಕಂಬಳ ಸಮೀಪದ ಈಶ್ವರಕಟ್ಟೆ ಎಂಬಲ್ಲಿ ನಡೆದಿದೆ. ಮೃತರು ತೆಂಕೆಎಕ್ಕಾರ್ ನಿವಾಸಿ ಆನಂದ ಗೌಡ (37) ವರ್ಷ ಮೃತಪಟ್ಟ ರ್ದುದ್ಯೆವಿ
ಘಟನೆ ವಿವರ:
ಆನಂದ ಗೌಡ ಬೆಳಗ್ಗೆ 9.30ರ ಸಮಯ ಬಜ್ಪೆಯಿಂದ ಕೈಕಂಬದ ಕಡೆಗೆ ಬರುತ್ತಿದ್ದ ವೇಳೆ ಈಶ್ವರಕಟ್ಟೆ ಎಂಬಲ್ಲಿ ದನವೊಂದು ರಸ್ತೆಗೆ ಒಮ್ಮಲೆ ಅಡ್ಡ ಬಂದಾಗ ದನವನ್ನು ರಕ್ಷಿಸಲು ಸಡನ್ನಾಗಿ ಬ್ರೇಕ್ ಹಾಕಿದಾಗ ಅಟೋ ರಿಕ್ಷಾ ಪಲ್ಟಿಯಾಗಿ ಆನಂದ ಗೌಡರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದಾರೆ ಕೂಡಲೇ ಅವರನ್ನು ಸ್ಥಳೀಯರು ಸೇರಿ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ .ಬಜಪೆ ಪೋಲಿಸರು ಕೇಸು ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *