ಪೊಳಲಿ : ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂಬ ತುಡಿತ ಹಾಗು ಹಂಬಲವಿದ್ದಾಗ ಮಾತ್ರ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದು ಮೈಸೂರಿನ ರಾಮಕೃಷ್ಣ ನೈತಿಕ ವಿದ್ಯಾಸಂಸೆಯ ಮುಖ್ಯಸ್ಥರಾದ ಶ್ರೀ ಮಹೇಶತ್ಮಾನಂದಜಿ ತಿಳಿಸಿದರು.  ಅವರು ಭಾನುವಾರ ಪೊಳಲಿಯ ರಾಮಕೃಷ್ಣ ತಪೋವನದ ಒಂಬತ್ತನೇ ವಾರ್ಷಿಕೊತ್ಸವದ ಶುಭ ಸಂಧರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.12-4
 ಪ್ರತಿಯೊಬ್ಬ ಮನುಷ್ಯನಲ್ಲಿ ದೇವರು ನೆಲೆಸಿದ್ದಾನೆ ಅನ್ನುವುದು ಎಷ್ಟು ಸತ್ಯವೋ ಹಾಗೆ ಇಂದು ಪ್ರತಿಯೊಬ್ಬ ಮನುಷ್ಯನು ಸಹ ಬೇರೆ ಬೇರೆ ರೀತಿಯಲ್ಲಿ ದುಶ್ಚಾಟಗಳ ದಾಸರಾಗಿದ್ದಾರೆ, ಹಿಂದೆ ಮನೆಯಲ್ಲಿ ಸಾಯಂಕಾಲದ  ಸಮಯದಲ್ಲಿ ಕನಿಷ್ಠ ಹದಿನೈದು ನಿಮಿಷಗಳಾದರೂ ಭಜನೆ ದೇವರ ನಾಮ ಸ್ಮರಣೆಗಳು ನಡೆಯುತ್ತಿತ್ತು ಆದರೆ ಇಂದು ಆ ನಾಮಸ್ಮರಣೆಗಳು ದೇವರ ಸ್ಮರಿಸುವ ಬದಲಾಗಿ ಹಾಳು ಧಾರಾವಾಹಿಗಳ ಸ್ಮರಣೆಯಾಗುತ್ತಿದೆ ಇದು ಬೇಸರದ್ದ ಸಂಗತಿ ಎಂದರು.12-5
12-6
12-6 ವೇದಿಕೆಯಲ್ಲಿ ರಾಮಕೃಷ್ಣ ತಪೋವನದ ಮುಖ್ಯಸ್ಥರಾದ ಸ್ವಾಮಿ ವಿವೇಕಚೈತನ್ಯಾನಂದ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ವತಿಯಿಂದ ಸುಮಾರು ಮುನ್ನೂರು ಅಶಕ್ತ ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ,ಊಟದ  ತಟ್ಟೆ ಹಾಗೂ ದವಸ ಧಾನ್ಯಗಳನ್ನು ನೀಡಲಾಯ್ತು.
12-7
12-8

By Suddi9

Leave a Reply

Your email address will not be published. Required fields are marked *