ಬದಿಯಡ್ಕ: ಇಲ್ಲಿನ ಪಳ್ಳತ್ತಡ್ಕ ಎ.ಯು.ಪಿ.ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ ಸಮೀಪದ ಕೋರಿಕ್ಕಾರ್ ಅಣೆಕಟ್ಟಿಗೆ ಬಯಲು ಪ್ರವಾಸವನ್ನು ಕೈಗೊಂಡರು.
ಪ್ರವಾಸದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಅಣೆಕಟ್ಟನ್ನು ವೀಕ್ಷಿಸಿದರು. ಎರಡು ಬದಿಯಿಂದ ಹಲಗೆಯನ್ನು ಇರಿಸಿ ಅದರೊಳಗೆ ಮಣ್ಣನ್ನು ತುಂಬಿಸಿ ಗಟ್ಟಿಯಾದ ತಡೆಯನ್ನು ಮಾಡಿ ನೀರನ್ನು ಸಂಗ್ರಹಿಸಿ ಇಡುವ ರೀತಿಯನ್ನು ನೋಡಿ ತಿಳಿದರು.
ಮರದಲ್ಲಿ ಮಡಕೆಯನ್ನಿರಿಸಿ ಜೇನು ಸಂಗ್ರಹಿಸುವ ರೀತಿಯನ್ನ ತೋರಿಸಿ ವಿವರಿಸಲಾಯಿತು. ಸಮೀಪದಲ್ಲಿದ್ದ ಬಾಳೆಯ ತೋಟವನ್ನು ನಿರೀಕ್ಷಿಸಲಾಯಿತು. ನೀರು ಮಲಿನವಾಗುವ ರೀತಿಯನ್ನು ವಿವರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಾಪಕರಾದ ಶರತ್, ವಿಘ್ನೇಶ್, ವಿದ್ಯಾ, ಮಮತಾ, ಶಾಲಿನಿ, ಶ್ರೀಲತ, ರೋಜ ಮತ್ತಿತರರು ಭಾಗವಹಿಸಿದ್ದರು.

