'5

ಮಂಗಳೂರು: ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಓರ್ವನನ್ನು  ರೌಡಿ ನಿಗ್ರಹ ದಳದ ಸಿಬ್ಬಂದಿ ಮೊರ್ಗನ್ಸ್  ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಬಂದರ್  ಟೌನ್ ಕಂಪೌಂಡು ನಿವಾಸಿ ಮೊಹಮ್ಮದ್ ಸರ್ಫುದ್ದೀನ್(23) ಬಂಧಿತ ಆರೋಪಿ  ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ: 2017ರ ಮಾರ್ಚ್ ತಿಂಗಳಿನಲ್ಲಿ ನಗರದ  ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪರಾರಿ ಅಂಗಡಿ ಬಳಿ ಯುವತಿ ಒಬ್ಬಂಟಿಯಾಗಿದುದ್ದನ್ನು ಕಂಡ ಆರೋಪಿ ಸರ್ಫುದ್ದೀನ್ ತಂಡ  ಸಿಗರೇಟ್ ಖರೀದಿಸುವ ನೆಪದಲ್ಲಿ ಅಲ್ಲಿಗೆ ಬಂದು  ಮೊಬೈಲ್ ದರೋಡೆ ಗೈದು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮೊಹಮ್ಮದ್ ಸರ್ಫುದ್ದೀನ್ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಸುಲಿಗೆ ಮತ್ತು ದರೋಡೆ (ಎರಡು ಪ್ರಕರಣ), ಮಂಗಳೂರು ಪೂರ್ವ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *