ಕುಪ್ಪೆಪದವು: ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಗಾಯಗೊಂಡಿರುವ ಘಟನೆ ಇಲ್ಲಿನ ಬೊಳಿಯ ರಸ್ತೆಯ ಅಟ್ಟೆಪದವು ಪೆಲತ್ತಕಟ್ಟೆಯಲ್ಲಿ ನಡೆದಿದೆ.

ಗಾಯಾಳನ್ನು ಮೋಹನ ಎಂದು ಗುರುತಿಸಲಾಗಿದೆ.

ಕುಪ್ಪೆಪದವು ರಿಕ್ಷಾ ಪಾರ್ಕಿನಲ್ಲಿ ದುಡಿಯುವ ಮೋಹನ ಎಂಬವರು ಸೋಮವಾರ ರಾತ್ರಿ ಸುಮಾರು 11ಕ್ಕೆ ಬಾಡಿಗೆ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಅಟ್ಟೆಪದವು ಪೆಲತ್ತಕಟ್ಟೆ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು ಹದಿನೈದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ ಎನ್ನಲಾಗಿದೆ.

IMG-20180227-WA0035ರಿಕ್ಷಾದಲ್ಲಿ ಚಾಲಕರೊಬ್ಬರೇ ಇದ್ದು ಹಿಂಬದಿಯಲ್ಲಿ ಪ್ರಯಾಣಿಕರು ಯಾರು ಇಲ್ಲದೇ ಇದ್ದುದರಿಂದ ಯಾವುದೇ ಅನಾಹುತ ಆಗಿಲ್ಲ ಚಾಲಕ ಮೋಹನ್‍ರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

By Suddi9

Leave a Reply

Your email address will not be published. Required fields are marked *