ಯಾರಿಗಾದರೂ ಅಂದುಕೊಂಡದ್ದು ಆಗದಿದ್ದರೂ, ಯಾವಗೆಂದರೆ ಆಗ ಕಷ್ಟಗಳು, ಸಮಸ್ಯೆಗಳು ಎದುರಾಗುತ್ತಿದ್ದರೇ ಎಷ್ಟು ಟೈಂ ಬ್ಯಾಡ್ ಅಂದುಕೊಳ್ಳುತ್ತಾರೆ. ಕೆಲವರಾದರೆ ತಮ್ಮ ಜಾತಕವೇ ಸರಿ ಇಲ್ಲವೆಂದು ಭಾವಿಸುತ್ತಾರೆ. ಇನ್ನೂ ಕೆಲವರಾದರೇ ಅಂದುಕೊಂಡದ್ದು ಆಗದೇ ಅಂದುಕೊಳ್ಳದು ಕೂಡ ಕೂಡಿ ಬರುತ್ತದೆ. ಅವರಿಗೆ ಟೈಂ ಚೆನ್ನಾಗಿದೆ, ಅದಕ್ಕಾಗಿ ಆ ರೀತಿ ಕಾಲ ಕೂಡಿ ಬರುತ್ತಿದೆ ಎಂದು ಭಾವಿಸುತ್ತಾರೆ. ಅಂದರೆ ಜಾತಕಗಳನ್ನು , ಜ್ಯೋತಿಷ್ಯವನ್ನು ನಂಬುವವರು ಈ ರೀತಿ ಹೇಳುತ್ತಾರೆ. ಅದರ ಮೇಲೆ ನಂಬಿಕೆ ಇಲ್ಲದವರು ಅವುಗಳನ್ನು ತಲೆ ಕೆಡಿಸಿ ಕೊಳ್ಳುವುದಿಲ್ಲ,.ಅದು ಬೇರೆ ವಿಷಯ ಆದರೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿರುವ ಪ್ರಕಾರವಾದರೇ, ಟೈಂಗೆ , ಜಾತಕಕ್ಕೆ.ಸಂಬಂಧ ಇರುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಹುಟ್ಟಿದ ದಿನಾಂಕ, ಸಮಯವನ್ನು ಹಿಡಿದು ಪಂಡಿತರು ಅವರ ಜಾತಕಗಳನ್ನು ನಿರ್ಣಾಯಿಸುತ್ತಾರೆ. ಈ ಕ್ರಮವಾಗಿ ಯಾರಾದರೂ ದಿನದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಹುಟ್ಟಿದರೇ ಅಂತಹವರು ಕೆಲವು ಲಕ್ಷಣಗಳು, ಮನಸ್ತತ್ವಗಳು ಸೇರಿಸಿ ಇರುತ್ತಾರಂತೆ. ಆ ಸಮಯವನ್ನು ಹಿಡಿದು ಅವರ ಜಾತಕದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿಕೊಳ್ಳ ಬಹುದಂತೆ. ಅದೇನೆಂದು ಈಗ ನೋಡೋಣ.
ಮುಂಜಾನೆ 4ರಿಂದ 6ಗಂಟೆಗಳ ಮಧ್ಯದಲ್ಲಿ ಹುಟ್ಟಿದವರಾದರೇ..
ಇವರು ಅನಾರೋಗ್ಯದ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸ ಬೇಕಾಗುತ್ತದೆ. ಇತರರಿಗೆ ಇರುವ ಅಸೂಯೆಯ ಕಾರಣದಿಂದ ಇವರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡುವುದರಲ್ಲಿ ಅಮಿತವಾದ ಹಿಡಿತವನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ಮೇಲೆ ತಮಗೆ ದೃಢವಾದ ನಂಬಿಕೆ ಇರುತ್ತದೆ. ಇವರ ಭವಿಷ್ಯವು ಅಂದುಕೊಂಡ ಸ್ಥಾನಕ್ಕೆ ಆಶಾಜನಕವಾಗಿಯೇ ಇರುತ್ತದೆ. ಆದರೆ ಇವರು ಅಂದುಕೊಂಡದ್ದು ಹೆಚ್ಚು ನೆಮ್ಮದಿಯಿಂದ ನಡೆಯುತ್ತದೆ. ಆದರೆ ಆ ರೀತಿ ನೆಮ್ಮದಿಯಿಂದ ಕೊನೆಗೆ ಇವರು ,ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.
ಮುಂಜಾನೆ 6ರಿಂದ 8ಗಂಟೆಯ ಮಧ್ಯದಲ್ಲಿ..
ಈ ಸಮಯದಲ್ಲಿ ಹುಟ್ಟಿದವರಿಗೆ ಜೀವನದಲ್ಲಿ ಹೆಚ್ಚು ರಹಸ್ಯಗಳು ಇರುತ್ತದೆ. ಇವರು ಸ್ವಲ್ಪ ಆಶಿಸಿದ ಅಮಿತವಾದಷ್ಟು ಫಲಿತಾಂಶ ಸಿಗುತ್ತದೆ. ಆದರೆ ಇವರು ಹೆಚ್ಚಾಗಿ ಪ್ರಶಾಂತವಾಗಿರಲು ಪ್ರಯತ್ನಿಸಬೇಕು. ಕ್ರಮ ಶಿಕ್ಷಣದಿಂದ, ಎಂದಿಗೂ ಉತ್ಸಾಹದಿಂದ ಇರುವುದಕ್ಕೆ ಪ್ರಯತ್ನಿಸಬೇಕು. ಸರಿಯಾದ ಬಿಜಿ಼ನೆಸ್ ಯಾವುದೆಂದು ತಿಳಿದುಕೊಂಡು ಅದರಲ್ಲಿ ಹೂಡಿಕೆ ಇಟ್ಟರೇ ಅದರಲ್ಲಿ ರಾರಾಜಿಸುತ್ತಾರೆ.
ಮುಂಜಾನೆ 10ರಿಂದ 12ಗಂಟೆಗಳ ಮಧ್ಯೆ..
ಇವರು ಪ್ರತಿ ವಿಷಯದಲ್ಲೂ ವಿಜಯವನ್ನು ಸಾಧನೆಯನ್ನು ಕಾಣುತ್ತಾರೆ. ಅತ್ಯಂತ ಅದೃಷ್ಟಕರವಾದ ಜೀವನವನ್ನು ಆಸ್ವಾದಿಸುತ್ತಾರೆ. ಆದರೆ ಎಂತಹ ಅದೃಷ್ಟವಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳದಿದ್ದರೇ ತೊಂದರೆಗಳನ್ನು ಪಡುತ್ತಾರೆ.
ಮಧ್ಯಾಹ್ನ 12ರಿಂದ 2ರ ಮಧ್ಯೆ
ಇವರು ಅತ್ಯಂತ ಪ್ರತಿಭಾವಂತರಾಗಿ ಇರುತ್ತಾರೆ. ಇವರಿಗೆ ಧಯೆ, ದಾಕ್ಷಿಣ್ಯ, ಕರುಣೆ ಹೆಚ್ಚಾಗಿ ಇರುತ್ತದೆ. ಇದರೊಂದಿಗೆ ಇವರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಇವರು ಕಷ್ಟಪಟ್ಟರೆ ಜೀವನದಲ್ಲಿ ಪ್ರಮುಖ ವ್ಯಕ್ತಿಗಳಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.

