311ಸೌದಿ ಅರೆಬಿಯಾ: ಭಾರತದ ಮೂಲದ ಡೇವಿಡ್ ಜ಼ಂಬೆರಿ ಇಲ್ಲಿನ ಅಭಾ ಅಸೀರ್ ಪ್ರಾಂತ್ಯದ ಅಲ್-ನಮಾಸ್ ಎಂಬಲ್ಲಿ ಸುಮಾರು 15 ವರ್ಷಗಳಿಂದ ವಾಹನವೊಂದರ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕಳೆದ ಜ.28ರಂದು ಊರಿಗೆ ಹೋಗುವ ಸಲುವಾಗಿ ಟಿಕೇಟ್ ಬುಕ್ ಮಾಡಿದ್ದರು. ಆದರೆ ಜ. 28ರ ಮುಂಜಾನೆ ಡೇವಿಡ್ ಅವರು ಅನಾರೋಗ್ಯದಿಂದ ಅಲ್-ನಮಾಸ್ ಜನರಲ್ ಆಸ್ಪತ್ರೆಗೆ ದಾಖಲಾಯಿಸತಾದರೂ ಬಳಿಕ ಹೃದಯ ಸ್ಥಂಬನದಿಂದ ಮ್ರತಪಟ್ಟಿದ್ದರು. ಇದರಿಂದ ಕಂಗಾಲಾಗಿದ್ದ ಮೃತ ಡೇವಿಡ್ ರವರ ಅಳಿಯ, ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಅಧ್ಯಕ್ಷರ ಮತ್ತು ಜಿದ್ದಾ ಕೌನ್ಸಲಿಟಿಯ ಸದಸ್ಯ ಹನೀಫ಼್ ಮಂಜೇಶ್ವರ ಅವರನ್ನು ಸಂಪರ್ಕಿಸಿ ನೆರವಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದರು.

 ಇದಕ್ಕೆ ಸ್ಪಂದಿಸಿದ ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಕಾರ್ಯದರ್ಶಿ ಆಸೀರ್ ಕುಂಜದಕಟ್ಟೆ, ಇಬ್ರಾಹೀಂ ದೇರಳಕಟ್ಟೆ, ನೂರುದ್ದೀನ್ ಆವಿನಹಳ್ಳಿ, ಮನ್ಸೂರ್, ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರ ಭೇಟಿ ನೀಡಿ ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.

 ಹೀಗೆ ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಸತತ ಪರಿಶ್ರಮದ ಫಲವಾಗಿ ಡೇವಿಡ್ ಜ಼ಂಬೆರಿ ರವರ ಮೃತದೇಹವನ್ನು ಅಂತಿಮವಾಗಿ ಫೆ. 18 ರಂದು ಅಭಾ ವಿಮಾನ ನಿಲ್ದಾಣದಿಂದ ಮುಂಬೈ ಮಲಾಡ್ ವಿಮಾನ ನಿಲ್ದಾಣದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಇಂಡಿಯನ್ ಸೋಶಿಯಲ್ ಪೋರಂ ಕಮೀಷ್ ಮುಶೈತ್ ಘಟಕದ ನೆರವಿನಿಂದ ಡೇವಿಡ್ ಜ಼ಂಬೆರಿ ಮೃತದೇಹವು ಸ್ವಗೃಹವನ್ನು ತಲುಪುವುದರೊಂದಿಗೆ ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಪತ್ನಿ ಹಾಗೂ ಸಂಬಂಧಿಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *