1

ಅಡ್ಡೂರು: ಕಾಮಗಾರಿ ನಡೆಯುತ್ತಿದ್ದ ವೇಳೆ ಬಂಡೆಕಲ್ಲೊಂದು ಇಟ್ಟಚ್ಚಿನ ಮೇಲೆ ಬಿದ್ದ ಪರಿಣಾಮ  ಒಪರೇಟರೋರ್ವ ಮೃತಪಟ್ಟಿರುವ ದಾರುಣ ಘಟನೆ ಇಲ್ಲಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಮೂಲತಃ ಅಸ್ಸಾಮಿನ ಕಪ್ತನಪುರದ ಅಪ್ಪು ಮಿಅ ಲಕ್ಸರ್(22) ಮೃತಪಟ್ಟವರೆಂದು ಗುರುತಿಸಲಾಗಿದೆ.

2

ಅಡ್ಡೂರಿನ ಸಹರಾ ಶಾಲೆಯ ಬಳಿ ಗುಡ್ಡೆಯೊಂದನ್ನು ಅಪ್ಪು ಅವರು ಇಟ್ಟಚ್ಚಿನಲ್ಲಿ ಕೊರೆಯುತ್ತಿದ್ದ ವೇಳೆ ಮೇಲಿನಿಂದ ಬಹು ಗಾತ್ರದ ಕಲ್ಲು ಬಿದ್ದಿದೆ. ಪರಿಣಾಮ ಅಪ್ಪು ಅವರು ಗಂಭಿರ ಗಾಯಗೊಂಡಿದ್ದು, ಬಳಿಕ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

3

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

By suddi9

Leave a Reply

Your email address will not be published. Required fields are marked *