ಏಪ್ರಿಲ್-1ರಿಂದ-ಬಸ್-ಟ್ಯಾಕ್ಸಿಗಳಿಗೆ-ಜಿಪಿಎಸ್-ಕಡ್ಡಾಯ

ದೆಹಲಿ: ಏಪ್ರಿಲ್ 1 ರಿಂದ ದೇಶದ ಎಲ್ಲ ಬಸ್ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಂದರೆ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್ ಅಂದರೆ ತುರ್ತು ಸಂದರ್ಭಗಳಲ್ಲಿ ನೆರವಿಗಾಗಿ ಒತ್ತಬಹುದಾದ ಗುಂಡಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಜಿಪಿಎಸ್ ಅಳವಡಿಸಿದಲ್ಲಿ, ಉಪಗ್ರಹಗಳ ನೆರವಿನಿಂದ ಯಾವುದೇ ವಾಹನ ಇರುವ ಸ್ಥಳವನ್ನು ನಿಖರವಾಗಿ ಗುರುತಿಸಬಹುದು. ಸರ್ಕಾರದ ಈ ಕ್ರಮದಿಂದ ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಪೊಲೀಸರನ್ನು ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾಗುತ್ತದೆ ಎಂದು ಸರಕಾರ ಹೇಳಿದೆ.

ಯಾವುದೇ ಸಂಸ್ಥೆಯವರೂ ಕೂಡ, ತಮ್ಮ ವಾಹನ ಎಲ್ಲಿದೆ, ನಿಗದಿತ ಮಾರ್ಗದಲ್ಲಿ ಚಲಿಸುತ್ತಿದೆಯೇ ಇಲ್ಲವೇ ಎಂಬ ಮಾಹಿತಿಗಳನ್ನೂ ಈ ವ್ಯವಸ್ಥೆಯಿಂದ ಪಡೆದುಕೊಳ್ಳಬಹುದು. ಆಟೋಗಳು ಮತ್ತು ಎಲೆಕ್ಟ್ರಿಕ್ ರಿಕ್ಷಾಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಒಟ್ಟಿನಲ್ಲಿ ಸರ್ಕಾರದ ಈ ಕ್ರಮಕ್ಕೆ ಮಹಿಳಾ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *