ramanatha raiಪೊಳಲಿ: ನಮ್ಮ ಧರ್ಮವನ್ನು ಪ್ರೀತಿಸುವ ಮೂಲಕ ಮತ್ತೊಂದು ಧರ್ಮವನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕರೆ ನೀಡಿದ್ದಾರೆ.ಶನಿವಾರ ಇಲ್ಲಿನ ಸಾಣೂರು ಪದವಿನಲ್ಲಿ ಧರ್ಮಶಾಸ್ತ್ರ ಭಜನಾ ಮಂದಿರ ವತಿಯಿಂದ ಆಯೋಜಿಸಿದ್ದ 10ನೇ ವರ್ಷದ “ಭಜನಾ ಸಂಕೀರ್ತನೆ”ಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.10vp ramanatha rai

07

ನಮ್ಮ ಧರ್ಮದ ಭೋದನೆಯನ್ನು ಆಚರಿಸುವುದು ಮುಖ್ಯವಲ್ಲ. ಅದನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಅತೀ ಮುಖ್ಯ. ಜಾತಿ, ಧರ್ಮ ಹಾಗೂ ಭಾಷೆಗಳ ವಿಚಾರದಲ್ಲಿ ಜಗಳಗಳಾಗುತ್ತಿದೆ. ಅಲ್ಲದೆ, ನಂಬಿಕೆ ಹಾಗೂ ದೇವರ ಹೆಸರಿನಲ್ಲಿ ಹತ್ಯೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಾವು ಜಾತಿ, ಧರ್ಮವನ್ನು ಪ್ರೀತಿಸುವವರಾಗುವ ಬದಲಾಗಿ ಜಾತಿ ವಾದಿ, ಧರ್ಮಾಂದ್ಯರಾಗುವುದು ಬೇಡ ಎಂದು ಸಲಹೆ ನೀಡಿದರು.01

ದೀಪ ಬೆಳಗಿಸಿ  ಆಶೀರ್ವಚನ ನೀಡಿ ಮಾತನಾಡಿದ ಸ್ವಾಮಿ ವಿವೇಕ ಚೈತನ್ಯನಂದ ಅವರು  ಯಾರಿಗೆ ತನ್ನ ಧರ್ಮದ ಬಗ್ಗೆ ಅರಿವಿದೆಯೋ ಆತ ಪರ ಧರ್ಮವನ್ನು ತಿರಸ್ಕಾರ ಭಾವನೆಯಿಂದ ನೋಡುವುದಿಲ್ಲ. ಅಲ್ಲದೆ, ಆತ ಶ್ರದ್ಧೆ, ಭಕ್ತಿಯಿಂದ ಅದನ್ನು ಕಾಣುತ್ತಾನೆ ಎಂದ ಅವರು, ರಾಮ, ಕೃಷ್ಣ, ಯೇಸು, ಬುದ್ಧ ಅಥವಾ ಪ್ರವಾದಿ ಮೊಹಮ್ಮದ್ ಇನ್ನಿತರರು ಮನುಕುಲದ ಉದ್ಧಾರಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿ ಪ್ರೀತಿಯ ಸಂದೇಶ ಕೊಟ್ಟಿದ್ದಾರೆ ಎಂದು ವಿವರಿಸಿದರು.04

03

02

05

10vp sanmanaಈ ವೇಳೆ ಸಾಣೂರು ಹಿರಿಯ ನಾಗರಿಕ ಶಂಕರ ಪೂಜಾರಿ, ಜನಾರ್ಧನ ಪೂಜಾರಿ ಸಾಣೂರು, ಸತೀಶ್ ಪೂಂಜ ಹಾಗೂ ವಿಶ್ವನಾಥಪೂಜಾರಿ, ದಿ. ಲೋಕಯ್ಯ ಪೂಜಾರಿಯವರ ಸವಿನೆನಪಿನ ಅಂಗವಾಗಿ ಅವರ ಪುತ್ರ ದಾಮೋಧರ ಅವರನ್ನು ಸನ್ಮಾನಿಸಲಾಯಿತು. ಪ್ರಮಾಣ ಪತ್ರವನ್ನು ಗೀತಿಕಾ ಮತ್ತು ರವಿ ಸಾಣೂರುಪದವು ವಾಚಿಸಿದರು. ಪ್ರಸಾಂತ್ ವರದಿ ಮಂಡಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಲ್ಲಿಕಾ ಆಗ್ರೋ ಆಯಿಲ್ಸ್ ಮಾಲಕ ಪಿ.ಜಯರಾಮ ಕೃಷ್ಣ ಪೊಳಲಿ, ತುಂಬೆ ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆಗುತ್ತು, ತಾ.ಪಂ.ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ಗ್ರಾ.ಪಂ.ಸದಸ್ಯೆ ವೀಣಾ ಉಪೇಂದ್ರ ಆಚಾರ್ಯ , ಕುಶಾಲ್ ಇಂಡಸ್ಟ್ರೀಸ್ ಮಾಲಕ ಜನಾರ್ಧನ,ವಾಮದಪದವು ಸತೀಶ್ ಪೂಂಜ,ಶಿವಪ್ರಸಾದ್ ಸೊಲ್ತಾಡಿ ಹಾಗೂ ಧರ್ಮಶಾಸ್ತ್ರ ಭಜನಾ ಮಂದಿರದ ಅಧ್ಯಕ್ಷ ವಾಮನ ಸಾಲ್ಯಾನ್ ಉಪಸ್ಥಿತರಿದ್ದರು. ರಕ್ತೇಶ್ವರೀ ಮಹಳಾ ಭಜನಾ ತಂಡದ ಸದಸ್ಯೆರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಜ್ಯೋತಿಗುಡ್ಡೆ ಉದಯ ಪೂಜಾರಿ ನಿರೂಪಿಸಿದರು. ವಾಮನ ಸಾಲಿಯಾನ್ ಸ್ವಾಗತಿಸಿ ಲೋಕೇಶ್ ವಂದಿಸಿದರು.

 

By Suddi9

Leave a Reply

Your email address will not be published. Required fields are marked *