ಅಡ್ಡೂರು:  ಸ್ವಲಾತ್ ಕಮಿಟಿ ಗರಡಿ ಜಂಕ್ಷನ್ ವತಿಯಿಂದ ಮಹಿಳೆ ಹಾಗೂ ಪುರುಷರಿಗೆ ಉಚಿತ ‘ಸಪ್ತಾಹಿಕ ಧಾರ್ಮಿಕ ಕಲಿಕಾ ತರಗತಿ’ ಫೆ.11ರಿಂದ ಇಲ್ಲಿನ ಗರಡಿ ಮಸೀದಿ ವಠಾರದಲ್ಲಿ ಇಶಾ ನಮಾಝಿನ ಬಳಿಕ ಆಯೋಜಿಸಲಾಗಿದೆ.

ಅಂದಿನಿಂದ ಪ್ರಾರಂಭಗೊಳ್ಳುವ ಈ ತರಗತಿ ಪ್ರತೀ ಭಾನುವಾರ ನಡೆಯಲಿದ್ದು, ಫಿಕ್ಹ್, ಕುರ್ ಆನ್, ಕರ್ಮ ಶಾಸ್ತ್ರ, ಹದೀಸ್ ಹಾಗೂ ಆಧ್ಯಾತ್ಮಿಕ ಚೈತನ್ಯದ ಕುರಿತು ಮಾಹಿತಿ ನೀಡಲಾಗುವುದು.

ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದ್ದು, ಗ್ರಾಮದ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಕಟನೆ ಕೋರಿದೆ.

By Suddi9

Leave a Reply

Your email address will not be published. Required fields are marked *