ಕಾಸರಗೋಡು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ಗುರುವಾರ ನಡೆದಿದೆ.
ಮೃತರನ್ನು ಮೂಲತಃ ಕುಂದಾಪುರದವರಾಗಿದ್ದು, ಭೀಮನಡಿಯ ನಿವಾಸಿಯಾಗಿರುವ ಎಂ.ಪಿ. ಲೂಕಚ್ಚನ್ ( 53) ಹಾಗೂ ವಿಜಯನ್ ( 38) ಎಂದು ಗುರುತಿಸಲಾಗಿದೆ.
ಲೂಕಚ್ಚನ್ ಹಾಗೂ ವಿಜಯನ್ ಸೇರಿ ಬೈಕ್ ನಲ್ಲಿ ಕುಂದಾಪುರದಿಂದ ಕಾಸರಗೋಡಿನ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾಸರಗೋಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

