ಕಾಸರಗೋಡು: ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಮಂಜೇಶ್ವರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಮಂಜೇಶ್ವರ ಪೊಸೊಟು ನಿವಾಸಿ ದಿ.ಕೆ.ಟಿ. ಅಬೂಬಕ್ಕರ್ ಅವರ ಮಗಳು ಆಮಿನಾ (50) ಅವರ ಸಹೋದರಿ ಆಯಿಷಾ (40) ಹಾಗೂ ಮೂರು ವರ್ಷದ ಬಾಲಕ ತಾಮೀಲ್ ಮೃತಪಟ್ಟವರು ಎಮದು ಗುರುತಿಸಲಾಗಿದೆ.
ಈ ಮೂವರು ರೈಲು ಹಳಿ ದಾಟುತ್ತಿದ್ದ ವೇಳೆ ಕಾಸರಗೋಡಿನಿಂದ ಮಂಗಳೂರಿನತ್ತ ರೈಲು ಎಂಜಿನ್ ಢಿಕ್ಕಿ ಹೊಡೆದು ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

