DSC_0479

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಸರಸ್ವತಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿಒಡಿಯೂರು ಶ್ರೀ ಕ್ಷೇತ್ರದ ಸಾಧ್ವಿ ಮಾತಾನಂದಮಯಿಯವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡುತ್ತಾ ಶಿಕ್ಷಣ ಎನ್ನುವುದು ಚಾರಿತ್ರ್ಯ ನಿರ್ಮಿಸುವ ಸಾಧನ. ಹಣ ಬರುತ್ತದೆ, ಹೋಗುತ್ತದೆ ಆದರೆ ನೈತಿಕತೆ ಒಮ್ಮೆ ಬಂದರೆ ಹೋಗುವುದಿಲ್ಲ. ಇಂತಹ ದೃಷ್ಟಿಕೋನ ಇಟ್ಟುಕೊಂಡು ಶಿಕ್ಷಣದ ಜೊತೆಗೆ ಜೀವನದ ಮೌಲ್ಯ ಭಾರತೀಯ ಸಂಸ್ಕೃತಿ, ರಾಷ್ಟ್ರೀಯ ಭಾವನೆಯನ್ನು ಬೆಳೆಸುವ ಶಿಕ್ಷಣ ಸಂಸ್ಥೆಯನ್ನು ಪೂಜ್ಯನೀಯಡಾ| ಪ್ರಭಾಕರ ಭಟ್‍ರವರುಕಟ್ಟಿ ಬೆಳೆಸಿದ್ದಾರೆ. ಶ್ರೀರಾಮ ವಿದ್ಯಾಕೇಂದ್ರರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಮಟ್ಟಕ್ಕೆಕೊಂಡೊಯ್ಯುವಂತಹಅಪ್ರತಿಮ ಸಂಸ್ಥೆ.ಇಂತಹ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹೇಳಿದರು.

ಶ್ರೀಯುತ ಕಶೆಕೋಡಿ ಸೂರ್ಯನಾರಾಯಣ ಭಟ್‍ರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿತು.ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ನಿತ್ಯ ನಿರಂತರಅಭ್ಯಾಸದಿಂದ ಮಾತ್ರ ವಿದ್ಯೆ ಫಲಿಸಲು ಸಾಧ್ಯ, ಆದ್ದರಿಂದ ಸಾತ್ವಿಕ ಶಕ್ತಿಯನ್ನುಕೊಡುವತಾಯಿ ಶಾರದೆಯನ್ನು ಪೂಜಿಸಿ ವಿದ್ಯೆಕಲಿಯಬೇಕುಎಂದು ಹೇಳಿದರು.ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ಸರಸ್ವತಿ ಪೂಜೆ ಮಾಡಿಸಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಡಾ| ಪ್ರಭಾಕರ ಭಟ್‍ಕಲ್ಲಡ್ಕ, ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ವಹಿಸಿದ್ದರು.  ನಾರಾಯಣ ಸೋಮಯಾಜಿ, ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರ,  ವಸಂತ ಮಾಧವ, ಸಂಚಾಲಕರು, ಶ್ರೀರಾಮ ವಿದ್ಯಾಕೇಂದ್ರ ಹಾಗೂ ಎಲ್ಲಾ ವಿಭಾಗದ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿಯವರು, ಎಲ್ಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು  ತಿರುಮಲೇಶ್ವರ ಪ್ರಶಾಂತ್, ಕಾಲೇಜುಉಪನ್ಯಾಸಕರು, ಸ್ವಾಗತಿಸಿ, ರೂಪಕಲಾ, ಪ್ರಾಥಮಿಕ ಶಿಕ್ಷಕಿ, ವಂದಿಸಿದರು.  ಕೃಷ್ಣಪ್ರಸಾದ್‍ಕಾಯರ್‍ಕಟ್ಟೆ, ಪದವಿ ಕಾಲೇಜು ಪ್ರಾಂಶುಪಾಲರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *