ಪೊಳಲಿ: ಎಸ್.ಆರ್.ಹಿಂದೂ ಫ್ರೆಂಡ್ಸ್ ಪೊಳಲಿ ಇದರ 12ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯು ಇಲ್ಲಿನ ದೇವಾಸ್ಥಾನದ ಹಿಂಬದಿಯ ಕ್ರೀಡಾ ಮೈದಾನದಲ್ಲಿ ತ್ತೀಚೆಗೆ ನಡೆಯಿತು.
ಈ ವೇಳೆ 16 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಪ್ರಥಮ ಸ್ಥಾನ ಕುಡ್ಲ ಸ್ಟ್ರೈಕರ್ಸ್ ಕುಡ್ಲ, ದ್ವಿತೀಯ ಸ್ಥಾನ ಎಂಪಿಸಿ ಬಜಿಲಕೆರೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜೇಶ್ ನಾಯ್ಕ್ ಉಳಿಪಾಡಿ, ವೆಂಕಟೇಶ ನಾವಡ, ಸತ್ಯಜಿತ್ ಸುರತ್ಕಲ್, ಲೋಕೇಶ್ ಭರಣಿ, ಯಶವಂತ ಕೋಟ್ಯಾನ್, ಹರೀಶ್ ಪೊಳಲಿ, ನಾಗೇಶ್ ಪೊಳಲಿ, ಚಂದ್ರಾವತಿ ನಾಗೇಶ್ ದೇವಾಡಿಗ, ಕೃಷ್ಣಪ್ಪ ಪೊಳಲಿ, ರೋಶನ್ ಅಮೀನ್ ಪುಂಚಮೆ, ಸುರೇಂದ್ರ ಪೊಳಲಿ,ದಿವಾಕರ ಪೊಳಲಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




