613

ಚೆನ್ನೈ: ಸ್ವಯಂ ಘೋಷಿತ ದೇವಮಾನವಗಳಲ್ಲಿ ಒಂದೆನಿಸಿರುವ ನಿತ್ಯಾನಂದ ಸ್ವಾಮಿಯ ಬಂಧನಕ್ಕೆ ಮದ್ರಾಸ್ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.

ನಿತ್ಯಾನಂದ ಅವರು ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಅವರನ್ನು ಬಂಧಿಸಿ ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಮಾಧವನ್ ಆದೇಶ ನೀಡಿದ್ದಾರೆ.

ವಿಚಾರಣೆ ವೇಳೆ ಮೊಬೈಲ್ ಫೋನ್ ನಲ್ಲಿ ನ್ಯಾಯಾಲಯದ ಕಲಾಪವನ್ನು ಚಿತ್ರೀಕರಿಸಿದ ನಿತ್ಯಾನಂದ ಶಿಷ್ಯನ ಕೈಯಲ್ಲಿರುವ ಮೊಬೈಲ್ ವಶಪಡಿಸಿಕೊಳ್ಳವಂತೆ ನ್ಯಾಯಾಲಯದ ಆದೇಶ ನೀಡಿದೆ.

 

 

By Suddi9

Leave a Reply

Your email address will not be published. Required fields are marked *