65451231

ದಿಲ್ಲಿ: 28ರ ವಯಸ್ಸಿನ ಕಾಮುಕನೋರ್ವ  8 ತಿಂಗಳ ಎಳೆ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಇಲ್ಲಿನ ನೇತಾಜಿ ಸುಭಾಷ್ ಪ್ರದೇಶದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಮಾಹಿತಿ ಪ್ರಕಾರ, ಮಗುವಿನ ಪೋಷಕರು ದಿನ ಕೂಲಿಗಾರಾಗಿದ್ದು, ಕೆಲಸಕ್ಕೆ ಹೋಗುವ ಮುನ್ನ ತನ್ನ ಮಗುವನ್ನು ಅತ್ತಿಗೆಯ ಬಳಿ ಕೊಟ್ಟು ಹೋಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅತ್ತಿಗೆಯ ಪುತ್ರ 28ರ ಯುವಕ ಕುಡಿತದ ಅಮಲಿನಲ್ಲಿ ಬಂದು ಈ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಮಗುವಿನ ಪೋಷಕರು ಕೆಲಸ ಮುಗಿಸಿ ರಾತ್ರಿ ಸುಮಾರು 12.30ರ ವೇಳೆಗೆ ಅತ್ತಿಗೆಯ ಮನೆಗೆ ಬಂದಾಗ ಮಗು ರಕ್ತದ ಮಡುವಿನಲ್ಲಿ ನರಳಾಡುತ್ತಿತ್ತು. ಇದರಿಂದ ಆಘಾತಗೊಂಡ ಪೋಷಕರು ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿಸಿದ ವೈದರು ಈ ವಿಚಾರವನ್ನು ಬೆಳಕಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಅನುಮಾನಗೊಂಡ ಮಗುವಿನ ಪೋಷಕರು ಅತ್ತಿಗೆಯ 28ರ ವಯಸ್ಸಿನ ಯುವಕನ ಮೇಲೆ ದೂರು ದಾಖಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಸಿ ವಿಚಾರಣೆ ನಡೆಸಿದಾಗ ಈ ಹೇಯ ಕೃತ್ಯವನ್ನು ತಾನೇ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

By suddi9

Leave a Reply

Your email address will not be published. Required fields are marked *