ಬಂಟ್ವಾಳ : ತೋಟಗಾರಿಕೆ ಇಲಾಖೆ , ಜಿ.ಪಂ.ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವರ ಸಂಯುಕ್ತ ಆಶ್ರಯದಲ್ಲಿ 2017-18 ಸಾಲಿನ ತಾಲೂಕು ಪಂಚಾಯತ್ ಯೋಜನೆಯಡಿ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ತರಬೇತಿ ಕಾರ್ಯಕ್ರಮ ನರಿಕೊಂಬು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂಅಧ್ಯಕ್ಷ ಚಂದ್ರ ಹಾಸ ಕರ್ಕೇರ ಮಾತನಾಡಿ ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಇಂತಹ ತರಭೇತಿ ಗಳು ಸಹಕಾರಿ. ಇಚ್ಛಾಶಕ್ತಿ ಯಿಂದ ಸಾವಯವ ಕ್ರಷಿಗೆ ಹೆಚ್ಚು ಒತ್ತು ನೀಡಿ ಆರೋಗ್ಯ ವನ್ನು ವ್ರದ್ದಿಸಿಕೊಳ್ಳಿ.ಆರ್ಥಿಕ ಸ್ವಾವಲಂಬನೆ ಗೆ ಸರಕಾರ ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿಮಾತನಾಡಿ ಯಾಂತ್ರಿಕ ತೆಯ ಜೀವನದಲ್ಲಿ ನಾವಿದ್ದೇವೆ, ಇದು ಬದಲಾವಣೆ ಆಗಬೇಕಾಗಿದೆ ಉದಾಶೀನತೆ ಬಿಟ್ಟು ರಾಸಾಯನಿಕ ತರಕಾರಿಗಳನ್ನು ತೊರೆದು ಸಾವಯವ ತರಕಾರಿಗಳನ್ನು ಬೆಳೆದು ನಾವು ಅರೋಗ್ಯವಂತರಾಗೋಣ ಎಂದರು.
ನರಿಕೊಂಬುಗ್ರಾ.ಪಂ.ಅದ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ ದೇಶ ಮುಂದುವರಿಯಬೇಕಾದರೆ ಮಹಿಳೆಯರು ಆರ್ಥಿಕ ವಾಗಿ ಶಕ್ತಿ ವಂತರಾಗಬೇಕಾಗಿದೆ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅನೇಕ ಸ್ವಾವಲಂಬಿ ಬದುಕಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಗಳ ಸದುಪಯೋಗ ವನ್ನು ಗ್ರಾಮದ ಮಹಿಳೆಯರು ಪಡೆದು ಉತ್ತಮ ಜೀವನನಡೆಸಿ ಎಂದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಮೇಲ್ವಿಚಾರಕಿ ಶಾಲಿನಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಾನಂದ ಪೂಜಾರಿ ಸಂಪನ್ಮೂಲ ವ್ಯಕ್ತಿ ಸುಮನಾ ಉಪಸ್ಥಿತರಿದ್ದರು. ಬಳಿಕ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಸಹಾಯಕ ತೋಟಗಾರಿಕೆಯ ನಿರ್ದೇಶಕ ದಿನೇಶ್ ಸ್ವಾಗತಿಸಿ ವಂದಿಸಿದರು.
