ಪೊಳಲಿ: ಸುಮಾರು ಐದು ಕುಟುಂಬಗಳು ಆರ್ಥಿಕ ಸಹಾಯವನ್ನು ಕೋರಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಇವರಿಗೆ ಸಹಾಯ ಹಸ್ತವನ್ನು ಯಾಚಿಸಿದಾಗ ಇದಕ್ಕೆ ಕೂಡಲೇ ಸ್ಪಂದಿಸಿದ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಇದರ ಸಂಚಾಲಕ ಸಂತೋಷ್ ಶೆಟ್ಟಿ ಪೊಳಲಿ ಹಾಗೂ ಅವರ ತಂಡ ಕ್ರಿಕೇಟ್ ಟೂರ್ನಿಮೆಂಟ್ ನಡೆಸಿ ಅದರಲ್ಲಿ ಬಂದ ಉಳಿತಾಯವನ್ನು ಈ ಕುಟುಂಬಗಳಿಗೆ ನೀಡುವುದೆಂದು ಅಲೋಚಿಸಿ ಕ್ರಿಕೇಟ್ ಟೂರ್ನ್ ಮೆಂಟ್ ಆಯೋಜಿಸಲಾಗಿತ್ತು. ಅದರಲ್ಲಿ ಉಳಿದ ಹಣ ಸುಮಾರು 1.50ಲಕ್ಷವನ್ನು ಐದು ಕುಟುಂಬಗಳಿಗೆ ಭಾನುವಾರ ನೀಡಲಾಯಿತು.
ಸಂದರ್ಭದಲ್ಲಿ ಮಾತಾನಾಡಿದ ವೆಂಕಟೇಶ್ ನಾವಡ ಕ್ರಿಕೆಟ್ ಟೂರ್ರ್ನ ಮೆಂಟ್ ನಿಂದ ಬಂದ ಹಣವನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಂತಹ ಕಾರ್ಯಕ್ರಮ ಉತ್ತಮ ಬೆಳವಣಿಗೆ ಎಂದು ಹೇಳಿದರು. ನೆರವು ನೀಡಲು ಎಲ್ಲಾ ವರ್ಗದ ಜನರ ಬೆಂಬಲದಿಂದಾಗಿ ನಾವು ಪ್ರಥಮ ಬಾರಗೆ ಆಯೋಜಿಸಿದ ಕಾರ್ಯಕ್ರಮ ಯಶಸ್ವಿಯಾಗಿದೆ ಇನ್ನು ಮುಂದೆಯು ನಾವು ಅಶಕ್ತ ಕುಟುಂಬಗಳಿಗೆ ನೆರವು ನೀಡುವುದಾಗಿ ಸಂತೋಷ್ ಶೆಟ್ಟಿ ಹೇಳಿದರು.
ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಸಾಣೂರು ಪದವಿನ ದಿನೇಶ್ ಎಂಬವರ ಪತ್ನಿ ವಿನಯ ಅವರಿಗೆ 50 ಸಾವಿರ ರೂಪಾಯಿ,ಗುರುಪುರ ಮಠದಗುಡ್ಡೆಯ ಮೋಕ್ಷಾ 11 ತಿಂಗಳ ಮಗುವಿನ ರಕ್ತ ಸಮಂದಿ ಕಾಯಿಲೆಗೆ ವೈದ್ಯಕೀಯ ಚಿಕಿತ್ಸೆಗೆ 25 ಸಾವಿರ, ಮೇರಮಜಲು ಪುರುಷೋತ್ತಮ ಎಂಬವರ ಮಗಲು ಕಾವ್ಯಳ ವೈದಕೀಯ ಚಿಕಿತ್ಸೆಗೆ 25 ಸಾವಿರ, ಬಡಕಬೈಲು ಮಣಿಕಂಠಪುರದ ಶೋಭಾ ಶೇಖರ ಅವರ ಮಗಳಾದ 9 ವರ್ಷದ ಹಿತಾಶ್ರೀ ಗೆ ಹೃದಯ ಕಾಯಿಲೆಯ ಚಿಕಿತ್ಸೆಗೆ 25 ಸಾವಿರ ,ಮಲ್ಲೂರು ದೆಮ್ಮಲೆ ಉಮೇಶ್ ಅವರ ಪತ್ನಿ ಜಯಂತಿ ಅವರಿಗೆ ಕ್ಯನ್ಸರ್ ಕಾಯಿಲೆಯ ಚಿಕಿತ್ಸೆಗೆ 25 ಸಾವಿರ ರೂಪಾಯಿಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ವಠಾರದಲ್ಲಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕುಡ್ಲ ಸ್ಟರೈಕರ್ಸ್ ಟೀ ಸರ್ಟ್ ಗಳನ್ನು ಯುವಕರಿಗೆ ಸತ್ಯಜಿತ್ ಸುರತ್ಕಲ್ ನೀಡಿ ಮಾತನಾಡಿದ ಅವರು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಯುವಕರನ್ನು ಪ್ರೋತ್ಸಾಹಿಸುವ ಕ್ರೀಡಾಕೂಟವನ್ನು ಏರ್ಪಡಿಸಿ ಅನಾರೋಗ್ಯದಿಂದ ಬಳಲುತ್ತಿದ್ದ ಐದು ಕುಟುಂಬಗಳಿಗೆ ಸುಮಾರು 1.50 ಲಕ್ಷ ದ ದೊಡ್ಡ ಮೊತ್ತವನ್ನು ನೀಡಿ ಈ ಭಾಗದ ಆದರ್ಶ ಸಂಘಟನೆಯಾಗಿ ಮೂಡಿ ಬರಲಿ ಇನ್ನಿತರ ಬೇರೆ ಬೇರೆ ಅನಾರೋಗ್ಯವಿದ್ದವರಿಗೆ ಆಶಾಕಿರಣವಾಗಿ ಯುವಕರು ಇನ್ನಷ್ಷೂ ಬಡ ಕುಟುಂಬಗಳಿಗೆ ನೆರವು ನೀಡಲು ದೇವಿ ಶಕ್ತಿ ನೀಡಲಿ ಎಂದರು.

ಈಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ,ರೋಶನ್ ಪುಂಚಮೆ, ಆನಂದಪೂಜಾರಿ,ಗುರುವಪ್ಪ,ಸುನೀಲ್, ಶಂಕರಮಟ್ಟಿ,ರಾಜೇಶ್ ಕೈಕಂಬ, ಅಮೃತ್,ರೋಹಿತ್ ಮಂಗಳೂರು, ರೇಖಾ ಪುಂಚಮೆ ಹರೀಶ್ ಶೆಟ್ಟಿಪೊಳಲಿ , ನವೀನ್ ಪೊಳಲಿ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

