82+

ತುಂಬೆ: ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಲ್ಲಿನ ತುಂಬೆಯ ನೇತ್ರಾವತಿ ನದಿಯಲ್ಲಿ ರವಿವಾರ ನಡೆದಿದೆ.ಮೃತರನ್ನು ತುಂಬೆ ನಿವಾಸಿ ಸುಲೈಮಾನ್ ಅವರ ಮಗ ಸವಾದ್ ( 30) ಮತ್ತು ಮಾರಿಪಳ್ಳ ನಿವಾಸಿ ಇಬ್ರಾಹಿಂ ಅವರ ಮಗ ರಮ್ಲಾನ್ ಎಂದು‌ ಗುರುತಿಸಲಾಗಿದೆ.

ಸವಾದ್ ಹಾಗೂ ರಮ್ಲಾನ್ ಸೇರಿ ಸುಮಾರು 9 ಮಂದಿಯ ತಂಡ ತುಂಬೆಗೆ ಆಗಮಿಸಿ ಇಲ್ಲಿನ ನೇತ್ರಾವತಿಗೆ ಈಜಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನೂ ನೀರು ಪಾಲಾದ ಇಬ್ಬರು ಯುವಕರ ಮೃತದೇಹಗಳು ತುಂಬೆ, ಸಜಿಪದ ಸ್ಥಳೀಯ ಪತ್ತೆಯಾಗಿವೆ.

 

By suddi9

Leave a Reply

Your email address will not be published. Required fields are marked *