ಮಂಗಳೂರು: ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪು ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ.25ರವರೆಗೆ ನಡೆಯಲಿದ್ದು. ಇದರ “ಹೊರೆಕಾಣಿಕೆಯ ಮೆರವಣಿಗೆಯ ಪೂರ್ವಭಾವಿ ಸಭೆ”ಯನ್ನು ಜ.29ರಂದು ಸೋಮವಾರ ಸಂಜೆ 6 ಗಂಟೆಗೆ ಕುಡುಪು ದೇವಸ್ಥಾನದ ಕೆರೆಯ ಮುಂಬಾಗದಲ್ಲಿರುವ ಸುಬ್ರಹ್ಮಣ್ಯ ಮಂದಿರದಲ್ಲಿ ನಡೆಯಲಿದೆ.
ಈ ಸಭೆಗೆ ಮಂಗಳೂರು ನಗರದ ದೇವಸ್ಥಾನ,ದೈವಸ್ಥಾನ,ಭಜನಾಮಂದಿರಗಳು ಸಂಘಸಂಸ್ಥೆಗಳು ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಮಂಡಳಿ ಸ್ವಸಹಾಯ ಗುಂಪಿನ ಪ್ರಮುಖರು ಈಸಭೆಯಲ್ಲಿ ಭಾಗವಹಿಸಬೇಕಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಕೆ. ಕೃಷ್ಣರಾಜ ತಂತ್ರಿ,ಹೊರೆಕಾಣಿಕೆಯ ಪ್ರಧಾನ ಸಂಚಾಲಕ ಕಡಂಬೋಡಿ ಮಹಾಬಲ ಪೂಜಾರಿ, ಸಂಚಾಲಕ ಶರಣ್ ಪಂಪ್ವೆಲ್ ವಿನಂತಿಸಿದ್ದಾರೆ.
