ಮಂಗಳೂರು: ಕಾರ್ಮಿಕರು ತಮ್ಮ ದೇಹದಲ್ಲಿರುವ ರಕ್ತವನ್ನು ಬೆವರಾಗಿ ಹರಿಸಿದ ಪ್ರತಿಫಲವೇ ಜಾಗತಿಕ ಅಭಿವೃದ್ಧಿ ಎಂದು ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿನಾಗರಾಜ್ಹೇ ಹೇಳಿದ್ದಾರೆ.
ಗುರುವಾರ ನಗರದ ಸರಕಾರಿ ನೌಕರರ ಸಂಘದ ಕರಾವಳಿ ಸಭಾಂಗಣದಲ್ಲಿ ನಡೆದ ಕಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಮಾಲಕರ ಎಸೋಸಿಯೇಶನ್ 3ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗಾಗಿ ಸರಕಾರ ಕಲ್ಯಾಣ ಮಂಡಳಿ ರಚಿಸಿದ್ದು, ಚಾಲಕರು ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಘದ ಗೌರವಧ್ಯಕ್ಷ ಬಿ.ಕೆಇಮ್ತಿಯಾಜ್ ಮಾತನಾಡಿ, ಕಂಪೆನಿಗಳ ಲಾಭಕೋರತನ ಮತ್ತು ದಬ್ಬಾಳಿಕೆಗಳಿಂದಾಗಿ ಆಪರೇಟರುಗಳು ಸಂಕಷ್ಟದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಮಾತನಾಡಿ, ಸಂಘದ ಕಾರ್ಯಕ್ರಮಗಳಿಗೆ ಮೆಚ್ಚುಗೆವ್ಯಕ್ತಪಡಿಸುತ್ತಾ ಚಾಲಕರಿಗೆ ಸರಕಾರದಿಂದ ಸಿಗುವಸವಲತ್ತುಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗರಾಜರೈ ಅಧ್ಯಕ್ಷತೆವಹಿಸಿದ್ದು, ಸಂಘದ ಉಪಾಧ್ಯಕ್ಷ ಮುನಾವರ್ ಆಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸಾದಿಕ್ ಕಣ್ಣೂರು ಸ್ವಾಗತಿಸಿ, ಕಮಲಾಕ್ಷ ಬಜಾಲ್ ವಂದಿಸಿದರು.

