ಕೋಲ್ಹಾಪುರ: ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ಸೊಂದು ನದಿಗೆ ಬಿದ್ದ ಪರಿಣಾಮ ಬಸ್ ನಲ್ಲಿದ್ದ 13 ಮಂದಿ ಪ್ರಯಾಣಿಕರು ಮೃತ ಪಟ್ಟ ದಾರುಣ ಘಟನೆ ಮಹಾರಾಷ್ಟ್ರ ಕೋಲ್ಹಾಪುರದ ಪಂಚಗಂಗಾ ನದಿಯಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಈ ಮಿನಿ ಬಸ್ ಇಲ್ಲಿನ ಗಣಪತಿ ಪುಲೆಯಿಂದ ಪುಣೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಂಚಗಂಗಾ ನದಿಗೆ ಬಿದ್ದಿದ್ದು, ಬಸ್ ನಲ್ಲಿದ್ದ 13 ಮಂದಿ ಪ್ರಯಾಣಿಕರು ಮೃತ ಪಟ್ಟು ಮೂವರು ಗಂಭೀರ ಗೊಂಡಿದ್ದಾರೆ. ಅಲ್ಲದೆ, ನದಿಯಲ್ಲಿ ಮುಳುಗಿದ 9 ತಿಂಗಳದ ಮಗುವಿನ ಮೃತ ದೇಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಯಲ್ಲಿ ಗಾಯಗೊಂಡವರನ್ನು ಕೋಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

