ಮರವೂರು: ಇಲ್ಲಿನ ಅದ್ಯಪಾಡಿ-ಉನಿಲೆ ಕಂದಾವರ ಬಳಿ ನಬಾರ್ಡ್ ಆರ್ ಡಿಎಫ್-22 ಯೋಜನೆಯಡಿ ಸುಮಾರು 1 ಕೋಟಿ 20ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಯು.ಪಿ.ಇಬ್ರಾಹೀಂ, ಕಂದಾವರ ಗ್ರಾ.ಪಂ. ಅಧ್ಯಕ್ಷ ವಿಜಯ ಸುವರ್ಣ, ಗ್ರಾ.ಪಂ.ಉಪಾಧ್ಯಾಕ್ಷ ದೇವಾನಂದ, ಮಾಜಿ ಗ್ರಾ.ಪಂ. ಅಧ್ಯಕ್ಷ ಗಿರಿಯಪ್ಪ ಗ್ರಾ.ಪಂ. ಸದಸ್ಯರಾದ ಕವಿತಾ, ರವಿ ಶಂಕರ್, ಶರ್ಮಿಲಾ, ಹರೀಶ, ಯಶೋಧರ, ಇಂಜಿನಿಯರ್ ಗೋಪಾಲ ಮತ್ತಿತರರು ಉಪಸ್ಥಿತರಿದ್ದರು.




