115111115151155451151515

ಗುಂಟೂರು: ಸರಕಾರಿ ಬಸ್ಸೊಂದು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸೇರಿ ವಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಇತರೆ ಮೂವರು ವಿದ್ಯಾರ್ಥಿಗಳು  ಗಾಯಗೊಂಡ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೇಪಾಡು ಗ್ರಾಮದಲ್ಲಿ ಗುರುವಾರ ನಡೆದಿದೆ.

ವಿದ್ಯಾರ್ಥಿಗಳಾದ ಗಾಯತ್ರಿ, ರೇಣುಕಾ, ಶೈಲಜಾ, ಕಾರ್ತಿಕ್‌  ರೆಡ್ಡಿ ಹಾಗೂ ಆಟೊ ಚಾಲಕ ಧನರಾಜ್‌ ಎಂದು ಗುರುತಿಸಲಾಗಿದೆ.

ಇನ್ನೂ ಗಾಯಾಗೊಂಡ ವಿದ್ಯಾರ್ಥಿಗಳನ್ನು ಇಲ್ಲಿನ  ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವರ ಕಾರ್ಯಾಲಯ ತಿಳಿಸಿದೆ.

ಶ್ರೀಶೈಲಂಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್, ವಿದ್ಯಾರ್ಥಿಗಳನ್ನು ಪೇರಚೇರ್ಲಾ ಎಂಬಲ್ಲಿನ ಶಾಲೆಗೆ ಒಯ್ಯುವ ಆಟೊ ರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಅಸೆಂಬ್ಲಿ ಸ್ಪೀಕರ್‌ ಕೊಡೆಲಾ ಶಿವಪ್ರಸಾದ ರಾವ್‌, ಮಾನವ ಸಂಪನ್ಮೂಲ ಸಚಿವ ಗಂಟಾ ಶ್ರೀನಿವಾಸ್‌ ರಾವ್‌ ಮತ್ತು ಆರೋಗ್ಯ ಸಚಿವ ಕಮಿನೇನಿ ಶ್ರೀನಿವಾಸ್‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *