ಬಂಟ್ವಾಳ: ಸಿದ್ದರಾಮಯ್ಯ ನೇತ್ರøತ್ವದ ಕಾಂಗ್ರೇಸ್ ಸರಕಾರ ಸುಭದ್ರ ಮತ್ತು ಸುಭಿಕ್ಷೆಯ ಜನಪರವಾದ ಆಡಳಿತ ನಡೆಸುವುದರ ಜೊತೆಗೆ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಪೂರೈಸುವಲ್ಲಿ ಸಫಲವಾಗಿದೆ ಎಂದು ಅಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಫರಂಗಿಪೇಟೆಯಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪುದು ಗ್ರಾ.ಪಂ.ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಸಮಬಾಳು ಸಮಪಾಲು ಎನ್ನುವ ಧ್ಯೆಯ ವಾಕ್ಯದೊಂದಿಗೆ ನಿವೇಶನ ರಹಿತರಿಗೆ ಹಕ್ಕು ಪತ್ರವನ್ನು ನೀಡಿ ಸಮಾಜದ ಕಟ್ಟಕಡೆಯ, ಶೋಷಿತ, ದುರ್ಬಲರು ಮತ್ತು ದಲಿರು ನೆಮ್ಮದಿಯ ಜೀವನ ನಡೆಸುವ ಕೆಲಸವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು. ಅನ್ನ ಬಾಗ್ಯದ ಮೂಲಕ ಬಡವರು ಸ್ವಾಬಿಮಾನದಿಂದ ಬದುಕುವಂತಾಗಿದೆ.

ಗ್ರಾ.ಪಂ.ಗಳಿಗೆ ಸರಕಾರ ನೀಡುವ ಎಲ್ಲಾ ಸವಲತ್ತುಗಳುಜನಸಾಮಾನ್ಯರಿಗೆ ತಲುಪಲು ಪಂಚಾಯತ್ ಸದಸ್ಯರು ಮುತುವರ್ಜಿವಹಿಸಬೇಕು. ಸಕಾರಾತ್ಮಕ ಚಿಂತನೆಯ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿ ನಕಾರಾತ್ಮಕ ಚಿಂತನೆಯ ಮೂಲಕ ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೆರಿಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಸದಸ್ಯೆ ಪದ್ಮಶ್ರೀ, ಗ್ರಾ.ಪಂ.ಸದಸ್ಯರಾದ ರಮ್ಲಾನ್ ಮಾರಿಪಳ್ಳ, ಜಾಹೀರ್, ಲಕ್ಮೀ, ಲಿಡಿಯೋ ಪಿಂಟೋ, ಜಾನಕಿ, ತಾ.ಪಂ.ಮಾಜಿ ಸದಸ್ಯ ಆಶಿಫ್ ಇಕ್ಬಾಲ್, ದ.ಕ.ಜಿಲ್ಲಾ.ಪ್ರಧಾನ ಕಾರ್ಯದರ್ಶಿ ಮೋನಪ್ಪ ಮಜಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಹನೀಫ್, ಮಾಝಿ ಉಪಧ್ಯಕ್ಷ ಮಹಮ್ಮದ್ ಭಾವ, ಹಿರಿಯರಾದ ಭಾಸ್ಕರ್ ರೈ, ಸಾಹಿತಿ ಮಹಮ್ಮದ್ ಮಾರಿಪಳ್ಳ, ಪಿಡಿಒ ಚಂದ್ರಾವತಿ,ಕಂದಾಯ ನಿರೀಕ್ಷಕ ರಾಮು ಮತ್ತು ಗ್ರಾಮಕರನಿಕ ಪ್ರದೀಪ್ ಉಪಸ್ಥಿತರಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಸ್ತಾವಿಸಿದರು. ಮಾಜಿ ಜಿ.ಪಂ.ಸದಸ್ಯ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಸ್ವಾಗತಿಸಿ ರಫೀಕ್ ಪೆರಿಮಾರ್ ವಂದಿಸಿದರು. ಮಹಮ್ಮದ್ ಗಝಾಲ್ ಕಾರ್ಯಕ್ರಮ ನಿರೂಪಿಸಿದರು. s 150 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಯಿತು.

