ಸುದ್ದಿ9 ಕೈಕಂಬ;
ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಪಟ್ರಕೋಡಿ ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಹಾಗೂ ಪೆರ್ಮಂಕಿ ಪಕೀರ ಬಲ್ಯಾಯ ಕುಟುಂಬಿಕರಿಂದ ಪೆಬ್ರವರಿ 8ರಂದು ಶನಿವಾರ ಅಷ್ಟಪವಿತ್ರ ನಾಗಮಂಡಲೋತವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಬಿಜೈ ಹೇಳಿದ್ದಾರೆ. ಫೆ.4 ರಿಂದ ವಿದಿ ವಿಧಾನಗಳು ಆರಂಭಗೊಂಡು. ಫೆ.8ರವರೆಗೆ ವಿವಿಧ ಸಾಂಸ್ಕ್ರತಿಕ ಧಾಮರ್ಿಕ ಕಾರ್ಯಕ್ರಮಗಳೂಂದಿಗೆ ಜರಗಲಿದೆ. ಫೆ 8ರಂದು ಪಟ್ರಕೋಡಿ ನಾಗಬ್ರಹ್ಮ ಸ್ಥಾನದಲ್ಲಿ ಕುಡುಪು ವೇದಮೂತರ್ಿ ಬ್ರಹ್ಮಶ್ರೀ ನರಸಿಂಹ ತಂತ್ರಿ ಮತ್ತು ಪೆರ್ಮಂಕಿ ಅನಂತರಾಮ ಭಟ್ ನೇತ್ರತ್ವದಲ್ಲಿ ಬ್ರಹ್ಮಕಲಶಾಭಿಷೇಕ, ಆಶ್ಲೇಷಾಬಲಿ ,ಮಹಾಪೂಜೆ ನಡೆಯಲಿದೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 12.15ರಿಂದ ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಮದ್ದೂರು ಕೃಷ್ಣಪ್ರಸಾದ್ ವೈದ್ಯ ಬಳಗದವರಿಂದ ಅಷ್ಟ ಪವಿತ್ರ ನಾಗಬ್ರಹ್ಮ ಮಂಡಲೋತ್ಸವ ನಡೆಯಲಿದೆ ಎಂದು ತಿಳಿಸಿದರು. ಪೆರ್ಮಂಕಿಗುತ್ತು ಕಿರಣ್ ಪಕ್ಕಳ ,ಪ್ರಸಾದ್ ಪಂಡಿತ್ ,ಪದ್ಮನಾಭ ಪೂಜಾರಿ, ಪದ್ಮನಾಭ ಜೋಶಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *