ಸುದ್ದಿ9ಬಜ್ಪೆ;ಪ್ರತಿಭಟನೆಯಲ್ಲಿ ಕಂಡುಬಂದ ಜನರು
ಪ್ರತಿಭಟನೆಯಲ್ಲಿ ಹಾಕಲಾದ ಟೆಂಟಿನಲ್ಲಿ ಪ್ರತಿಭಟನಾ ನಿರತರು
ಜೋಕಟ್ಟೆ: ಸಲ್ಫರ್ ಘಟಕ ಹಾಗೂ ಕೋಲ್ ಘಟಕ ಸ್ಥಾಪಿಸಲು ಜೋಕಟ್ಟೆ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
ಬಜ್ಪೆ: ಎಂಆರ್ಪಿಎಲ್ ಕಂಪೆನಿ ಜೋಕಟ್ಟೆಯಲ್ಲಿ ಸಲ್ಫರ್ ಘಟಕ ಹಾಗೂ ಕಲ್ಲಿದ್ದಲು ಘಟಕವನ್ನು ಸ್ಥಾಪಿಸುವುದನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಸಮಿತಿಯಿಂದ ಪ್ರತಿಭಟನೆ
ಬಜ್ಪೆ: ಎಂಆರ್ಪಿಎಲ್ ಕಂಪೆನಿಯವರು ಜೋಕಟ್ಟೆಯಲ್ಲಿ ಯಾವ ಕಾರಣಕ್ಕೂ ಸಲ್ಫರ್ ಘಟಕ ಹಾಗೂ ಕಲ್ಲಿದ್ದಲು ಘಟಕವನ್ನು ಸ್ಥಾಪಿಸಲು ಬಿಡುವುದಿಲ್ಲ. ಸಲ್ಫರ್ ಘಟಕದಿಂದ ವಿಷಕಾರಿ ಅನಿಲ ಸೂಸುತ್ತದೆ. ಕಲ್ಲಿದ್ದಲು ಘಟಕದಿಂದ ಹಾರುವ ಬೂದಿ ಸೃಷ್ಟಿಯಾಗುತ್ತದೆ. ಇದರಿಂದ ಜೋಕಟ್ಟಯ ಜನತೆಯ ಬದುಕು ದುರ್ಬರವಾಗಲಿದೆ ಎಂದು ಜೋಕಟ್ಟೆ ನಾಗರಿಕ ಸಮಿತಿ ಅಧ್ಯಕ್ಷ ಹಾಗೂ ಜೋಕಟ್ಟೆ ಗ್ರಾ.ಪಂ.ನ ಅಧ್ಯಕ್ಷರಾದ ಬಿ. ಶೇಖುಂಜಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜೋಕಟ್ಟೆಯಲ್ಲಿ ಎಂಆರ್ಪಿಎಲ್ ಕಂಪೆನಿಯವರು ಸಲ್ಫರ್ ಘಟಕ ಹಾಗೂ ಕೋಲ್ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು ಇದನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.
ಸಲ್ಫರ್ ಘಟಕದಿಂದ ವಿಷಕಾರಿ ಅನಿಲ ಸೂಸುತ್ತದೆ. ಇದರಿಂದ ಜೋಕಟ್ಟೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಕಲ್ಲಿದ್ದಲು ಘಟಕದಿಂದ ಹಾರು ಬೂದಿ ಸೃಷ್ಟಿಯಾಗುತ್ತದೆ ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈಗಾಗಲೇ ಕಂಪೆನಿ ಪಂಚಾಯತ್ಗೆ ನಿರಪೇಕ್ಷಣಾ ಪತ್ರ ಸಲ್ಲಿಸದೆ ಭೂಮಿಯನ್ನು ಸ್ವಾಧೀನಪಡಿಸಲು ಮುಂದಾಗಿದೆ. ಅಲ್ಲದೆ ಪರಿಸರ ಇಲಾಖೆಯ ಯಾವುದೇ ಅನುಮತಿಯ್ನು ಪಡೆದಿಲ್ಲ. ಸ್ಥಳೀಯರಿಗೆ ಈ ಕಂಪೆನಿಯನ್ನು ಸ್ಥಾಪಿಸುವ ಬಗ್ಗೆ ಯಾವುದೇ ಮುನ್ಸೂಚನೆಯನ್ನೂ ನೀಡಿಲ್ಲ. ಈ ಬಗ್ಗೆ ಕಂಪೆನಿಯ ಕೆಲ ಉದ್ಯೋಗಿಗಳಿಂದ ಮಾಹಿತಿ ದೊರಕಿದೆ. ಫೆ.2ರಂದು ಡಿಸಿಯವರಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಅವರು ಸ್ಥಳ ಪರಿಶೀಲನೆ ನಡೆಸಿ ಎಂಆರ್ಪಿಲ್ ಕಂಪೆನಿಯ ಪ್ರಮುಖರನ್ನು ಮಾತುಕತೆಗೆ ಕರೆದಿದ್ದರು. ಅದರ ಜೊತೆಗೆ ಕಂಪೆನಿ ವಿರೋಧಿ ಮುಖಂಡರನ್ನೂ ಮಾತುಕತೆಗೆ ಆಹ್ವಾನಿದ್ದರು. ಆದರೆ ಈ ಬಗ್ಗೆ ಮಾತುಕತೆಗೆ ಕಂಪೆನಿ ತನಗೆ ಸಂಬಂಧ ಪಡದ ವ್ಯಕ್ತಿಯನ್ನು ಮಾತುಕತೆಗೆ ಕಳಿಸಿ ಕೈತೊಳೆದುಕೊಂಡಿದೆ. ಇದಕ್ಕಾಗಿ ಡಿಸಿಯವರು ಸಭೆಯಲ್ಲೇ ಛೀಮಾರಿ ಹಾಕಿದ್ದಾರೆ.ಎಂದು ದೂರಿದರು.
ಅಲ್ಲದೆ ಕಂಪೆನಿಯ ಕಾರ್ಯಗಳು ಗ್ರಾಮಪಂಚಾಯತ್ನ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಪಂಚಾಯತ್ನ ಗಮನಕ್ಕೆ ತರಲಿಲ್ಲ. ಸವರ್ೇ ಕಾರ್ಯ ನಡೆಸಿರುವ ಪಂ. ವ್ಯಾಪ್ತಿಯ ಪ್ರದೇಶಕ್ಕೆ ಮಣ್ಣು ತುಂಬಿಸುವುದು ಮಾಡುತ್ತಿದ್ದಾರೆ. ನೀರಿನೊಂದಿಗೆ ರಾಸಾಯನಿಕ ಬರುತ್ತಿದ್ದರೂ ಯಾವೊಂದೂ ಕ್ರಮವನ್ನೂ ಕೈಗೊಂಡಿಲ್ಲ. ಸುರಕ್ಷಾ ನೀತಿಯನ್ನ ಕಂಪೆನಿ ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ಅವರು ದೂರಿದರು.
ಕಂಪೆನಿಯ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ: ಕಂಪೆನಿಯವರು ಕೂಡಲೇ ಸ್ಥಳೀಯರೊಂದಿಗೆ ಮಾತುಕತೆಗೆ ಬರಬೇಕು. ಹಾಗೂ ಕಂಪೆನಿಯನ್ನು ಯಾವಕಾರಣಕ್ಕೂ ವಕ್ಕರಿಸಲು ಬಿಡಬಾರದು. ಇಲ್ಲದಿದ್ದರೆ ಕಂಪೆನಿಗೆ ಸಂಬಂಧಿಸಿದ ವಾಹನವನ್ನು ಅಥವಾ ಅದರ ಉದ್ಯೋಗಿಗಳನ್ನು ಜೋಕಟ್ಟೆಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲೂ ಕಂಪೆನಿಗೆ ಸಂಬಂಧಿಸಿದ ವಾಹನ ಹಾಗೂ ಉದ್ಯೋಗಿಗಳನ್ನ ಜೋಕಟ್ಟೆಯಿಂದ ಹಿಂದಕ್ಕೆ ಕಳುಹಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಪ್ರತಿಭಟನೆಯನ್ನು ಕಂಪನೆ ಮುಖ್ಯಸ್ಥರು ಸ್ಥಳಕ್ಕೆ ಬೇಟಿ ನೀಡುವವರೆಗೆ ಮುಂದುವರಿಸುವುದಾಗಿ ಸಂಘಟನೆ ಹೇಳಿಕೊಂಡಿದೆ.
ಪ್ರತಿಭಟನೆಯ ನೇತೃತ್ವವನ್ನು ಬಿ. ಶೇಖುಂಜಿ ವಹಿಸಿದ್ದರು. ಪಂ.ನ ಮಾಜಿ ಅಧ್ಯಕ್ಷ ಬಿ.ಎ ಶೆರೀಫ್, ಪಂ.ಸದಸ್ಯರಾದ ಜಯಂತ್ ಸಾಲ್ಯಾನ್, ಮಾಧವ ಸುವರ್ಣ, ಸಂಶುದ್ದೀನ್, ಮಹಮ್ಮದ್ ರಫೀಕ್, ಊರಿನ ಮುಖಂಡರಾದ ಎ.ಎಂ ಅತ್ಥಾವುಲ್ಲಾ, ಟಿ.ಎ ಖಾದರ್, ಎಕೆ ಶರೀಫ್, ಅಶ್ರಫ್ಮತ್ತಿತರರು ಉಪಸ್ಥಿತತಿದ್ದರು

