ಬೆಂಜನಪದವು: ಆಯುಧ ಪೂಜೆ ಮತ್ತು ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು. ಆಯುಧ ಪೂಜೆಯ ಮೆರವಣಿಗೆಯಲ್ಲಿ ಈ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಕೊಟ್ಟಂತಹ ತಾಯಿ ಕಟೀಲುದುರ್ಗಾ ಪರಮೇಶ್ವರಿಯ ಫೋಟೊವನ್ನು ಕಾಲೇಜಿನ ಮುಖ್ಯ ದ್ವಾರದಿಂದ ಹುಲಿ ವೇಷ ದಾರಿಗಳು, ಚೆಂಡೆ ಮತ್ತು ನಾಸಿಕ್ ಬ್ಯಾಂಡ್ ಮುಖ್ಯ ಮಂಟಪಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ವಿ ಭಟ್, ಮೆಕನಿಕಲ್ ವಿಭಾಗದ ಮುಖ್ಯಸ್ಥ ಡಾ. ಬಿ ಕೆ ಪ್ರಭು, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಸತೀಶ್ ನುಗ್ಗೆಮಾರ್, ವಿಭಾಗೀಯ ಸಾಂಸ್ಕೃತಿಕ ಸಂಚಾಲಕ ನಾರಾಯಣಸ್ವಾಮಿ ಮತ್ತು ಬೋಧಕ, ಬೋಧಕೇತರು, ವಿದ್ಯಾರ್ಥಿ ಸಂಚಾಲಕರು ಉಪಸ್ಥಿತರಿದ್ದರು.


